Ad imageAd image

ಚನ್ನಮ್ಮನ ಕಿತ್ತೂರು: ಬಾಲ್ಯ ವಿವಾಹ ನಿಷೇಧ ಜಾಗೃತಿ

Bharath Vaibhav
ಚನ್ನಮ್ಮನ ಕಿತ್ತೂರು: ಬಾಲ್ಯ ವಿವಾಹ ನಿಷೇಧ ಜಾಗೃತಿ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಚೆಗೆ ಬಾಲ್ಯ ವಿವಾಹ ನಿಷೇಧ ಜಾಗೃತಿ ಕರ‍್ಯಕ್ರಮಗಳು ಜರುಗಿದವು.
ತಾಲೂಕಿನ ವೀರಾಪುರ, ಅಂಬಡಗಟ್ಟಿ, ದೇವರಶೀಗಿಹಳ್ಳಿ, ಕಾದರವಳ್ಳಿ, ಹುಣಸಿಕಟ್ಟಿ, ತುರಮರಿ, ಕಲಭಾವಿ ಸೇರಿ ವಿವಿಧ ಗ್ರಾಮಗಳಲ್ಲ ಬಾಲ್ಯ ವಿವಾಹ ನಿಷೇಧ ಜಾಗೃತಿ ನಡೆಸಿ ಜನರಿಗೆ ತಿಳಿವಳಿಕೆ ನೀಡಲಾಯಿತು. ನಿಮ್ಮ ಸುತ್ತಲಿನಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯುತ್ತಿದ್ದರೆ ತಕ್ಷಣವೇ ಸಹಾಯವಾಣಿ, ಅಥವಾ ಪೊಲೀಸ್ ಇಲಾಖೆ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ಜಾಗೃತಿ ಮೂಡಿಸಲಾಯಿತು.
ಬಾಲ್ಯ ವಿವಾಹದಿಂದಾಗುವ ತೊಂದರೆಗಳ ಕುರಿತು ಜನ ಜಾಗೃತಿ ಮೂಡಸಲಾಯಿತು. ಬಾಲ್ಯ ವಿವಾಹ ಮಾಡಿದರೆ, ಮುಂದೆ ಬಾಲ್ಯ ವಿವಾಹ ಮಾಡಿಕೊಂಡ ಜೋಡಿಗೆ ಆಗುವ ತೊಂದರೆಗಳ ಕುರಿತು ಸಮಗ್ರ ತಿಳಿವಳಿಕೆ ನೀಡಲಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!