ರಾಯಬಾಗ : ಕುಡಚಿ ಮತಕ್ಷೇತ್ರದ ಪರಮಾನಂದವಾಡಿ ಗ್ರಾಮ ಪಂಚಾಯತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ.
ಹೌದು ಕುಡುಚಿ ಮತಕ್ಷೇತ್ರದ ಪರಮಾನಂದವಾಡಿ ಗ್ರಾಮ ಪಂಚಾಯತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದದ್ದು ಪಂಚಾಯಿತಿ ಸದಸ್ಯನಿಂದಲೇ ದಾಖಲು ಸಮೇತ ಮುಖ್ಯ ಆರೋಪ.
ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರಗಳ ಕುರಿತು ಬಹಳಷ್ಟು ಸುದ್ದಿಗಳು ನಡೆಯುತ್ತಲೆ ಇವೆ ಅಂತದ್ರಲ್ಲಿ ಈಗ ಕುಡಚಿ ಮತಕ್ಷೇತ್ರದ ಪರಮಾನಂದವಾಡಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸಭೆ ಸಂದರ್ಭದಲ್ಲಿ ಪಂಚಾಯತಿ ಸದಸ್ಯನಿಂದಲೇ ಹಗರಣಗಳ ಆರೋಪ ಕೇಳಿಬಂದಿದೆ.
ಸುಮಾರು 21/22 ರಲ್ಲಿ 23 ನಡೆದ ಕೆಲಸಗಳನ್ನು ಈಗ 24 25 ರಲ್ಲಿ ಹಳೆ ಕಾಮಗಾರಿಗಳ ಹೊಸ ಪ್ರತಿ ತೋರಿಸಿ ಹೊಸ ಬಿಲ್ಲುಗಳ ಹಗರಣ ಮಾಡಿರುವ ಕುರಿತು ಪಂಚಾಯತಿಯ ಸದಸ್ಯರಿಂದಲೇ ಮಹತ್ವದ ಆರೋಪ.
ಹಾಗೂ ಎಸಿ ಕಾಲೋನಿ ಜನರಿಂದ ಬೆಡ್, ಚರಂಡಿ, ಕುಡಿಯುವ ನೀರು, ಲೈಟ್, ಮತ್ತು ಇನ್ನೂ ಹಲವು ಪಂಚಾಯಿತಿಯಿಂದ ಆಗಬೇಕಾದ ಕಾಮಗಾರಿಗಳು ಯಾವುದೇ ರೀತಿಯ ಕಾಮಗಾರಿ ನಡೆದೇ ಇಲ್ಲ ಎಂದು ಜನರಿಂದ ನೇರ ಆರೋಪ.
ನಮ್ಮ ವಾಹಿನಿಯವರು ಗ್ರಾಮ ಸಭೆ ನಡೆಯುತ್ತಿರುವಾಗ ಅಲ್ಲಿ ನಡೆದ ಸತ್ಯ ಘಟನೆ ಹಾಗೂ ಎಸಿ ಕಾಲೋನಿಯ ವಿಡಿಯೋ ನಿಮ್ಮ ಮುಂದೆ ಇಟ್ಟಿದ್ದೇವೆ ನೋಡಿ.
ವರದಿ : ರಾಜು ಮುಂಡೆ .




