ಗಾರಲ ದಿನ್ನಿ : ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರೆ ಕಾರ್ಯಕ್ರಮದಲ್ಲಿ ರಾಯಚೂರು ಗ್ರಾಮಾಂತರ ಶಾಸಕರು ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಸನಗೌಡ ದದ್ದಲ್ ರವರು ಭಗವಂತನ ಆರ್ಶಿವಾದವನ್ನು ಪಡೆದರು.
ಗಾರಲ ದಿನ್ನಿ ಗ್ರಾಮದಲ್ಲಿ ಗ್ರಾಮದ ಎಲ್ಲಾ ಸರ್ವ ಸಮುದಾಯದ ಜನಾಂಗ ಸೇರಿಕೊಂಡು ಶ್ರೀ ಗಾರಲದಿನ್ನಿ, ಮಾರುತೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಜರುಗಿಸಲಾಯಿತು ಜಾತ್ರಾ ಮಹೋತ್ಸವಕ್ಕೆ ತಮಿಳುನಾಡಿನಿಂದ ವಾದ್ಯಗಳನ್ನು ಕರೆಯಿ ಸಲಾಗಿತ್ತು. ಈ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್. ಗ್ರಾಮದ ಹಿರಿಯ ಮುಖಂಡರಾದ ಪೊಲೀಸ್ ಪಾಟೀಲ್ ಸಿದ್ದನಗೌಡ. ತಿಪ್ಪಯ್ಯ ಶೆಟ್ಟಿ.ಅನಿಲ್ ಕುಮಾರ್ ಪಠವಾರಿ. ವೆಂಕೋಬರಾವ್ ಪಠವಾರಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಯಲ್ಲೇಶ್ ನಾಯಕ್ ಚಂದ್ರಶೇಖರ ಗೌಡ ಆಶಾಪುರ್. ಜನಾರ್ದನ್ ಗೌಡ ಹಂಚಿನಾಳ. ಶರಣಪ್ಪ ಗೌಡ ಪೊಲೀಸ್ ಪಾಟೀಲ್. ಬಿಕಂ ಶರಣಪ್ಪ ಗೌಡ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು. ಪೊಲೀಸ್ ಸಿಬ್ಬಂದಿಗಳು ಊರಿನ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ: ಗಾರಲದಿನ್ನಿ ವೀರನಗೌಡ