ಚನ್ನಗಿರಿ : ಈ ಜಾತ್ರಾ ಮಹೋತ್ಸವವನ್ನು ಶ್ರೀ ಕರಿಯಮ್ಮ ದೇವಿಯ ಅಪ್ಪಣೆ ಮೇರೆಗೆ 19 ವರ್ಷಗಳ ಬಳಿಕ ಈ ಕೆಳಕಂಡಂತೆ ಅದ್ದೂರಿಯಾಗಿ ನಡೆಸಲು ದೇವಾಲಯದ ಆಡಳಿತ ಮಂಡಳಿಯವರು ಮತ್ತು ಗ್ರಾಮಸ್ಥರು ತೀರ್ಮಾನಿಸಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತನು ಮನ ಧನ ಸಾಕಾರದೊಂದಿಗೆ ಶ್ರೀಕರಿಯಮ್ಮ ದೇವಿಯವರ ಕೃಪೆಗೆ ಪಾತ್ರರಾಗಲು ವಿನಂತಿಸುತ್ತೇವೆ ಎಂದಿದ್ದಾರೆ.
ದಯಮಾಡಿ ಚನ್ನಗಿರಿ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ತಮ್ಮಲ್ಲಿ ಪ್ರಾರ್ಥನೆ ಕಾರ್ಯಕ್ರಮಗಳು 5/5/2025 ನೇ ಸೋಮವಾರ ಬೆಳಗ್ಗೆ 11 ರಿಂದ ಅಮ್ಮನವರನ್ನು ಮಧುವನಗಿತ್ತಿ ಮಾಡಿಕೊಂಡು ವಿವಧ ವಾದ್ಯಗೋಷ್ಠಿಗಳ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತಂದು ಅಂದಿನ ಪೂಜಾ ಕಾರ್ಯಕ್ರಮ ನಡೆಸಲಾಗುವುದು ದಿನಾಂಕ 6/5/2025ನೇ ಮಂಗಳವಾರ ಅಮ್ಮನವರನ್ನು ವೈಭವದೊಂದಿಗೆ ಕುದುರೆ ಉತ್ಸವದಲ್ಲಿ ಸಕಲ ವಾದ್ಯ ಗೋಸ್ಟಿಯೊಂದಿಗೆ ಗ್ರಾಮದ ರಾಜಭೀದಿಗಳಲ್ಲಿ ಮೆರವಣಿಗೆ ನಡೆಸಿ ಪುನಃ ದೇವಾಲಯಕ್ಕೆ ಕರೆತರುವುದು ದಿನಾಂಕ 07.05.2025ನೇ ಬುಧವಾರ ಕೋಣನ ಉತ್ಸವ ಹಾಗೂ ಅಮ್ಮನವರ ಕೆಂಡಾರ್ಚನೆ ದೇವಾಲಯದ ಹಿಂಬದಿಯ ಬ್ರಹ್ಮದೇವರ ದೇವಾಲಯದ ಬಳಿ ಸಕಲ ಬಾಜಾ ಭಜಂತ್ರಿಯಿಂದ ಅಮ್ಮನವರು ಆಗೇದಗುಡ್ಡೆ ತುಳಿಯುವುದು ಈ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವದಿಂದ ಕೂಡಿದ್ದು.
ಶ್ರೀ ಕರಿಯಮ್ಮ ದೇವಿಯ ದೈವ ಶಕ್ತಿಯು ವೈಭವದಿಂದ ಕೂಡಿರುತ್ತದೆ ಪುನಃ ಅಮ್ಮನವರನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತರುವುದು ದಿನಾಂಕ 8 5 2018ನೇ ಗುರುವಾರ ಅಮ್ಮನವರಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಗ್ರಾಮದಲ್ಲಿ ಮನರಂಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ದಿನಾಂಕ 9-5-2025ನೇ ಶುಕ್ರವಾರ ಮಧ್ಯಾನ 3ರಿಂದ ಸಂಜೆ 6 ವರೆಗೆ ಆನೆಯ ಉಸ್ತವ ಅಲಂಕೃತ ಅಂಬಾರಿ ಹೊತ್ತ ಆನೆಯ ಮೇಲೆ ಅಮ್ಮನವರ ಮೆರವಣಿಗೆಯನ್ನು ಸಕಲ ವಾದ್ಯಗೋಷ್ಠಿ ಯೊಂದಿಗೆ ಗ್ರಾಮದ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಗುವುದು.
ದಿನಾಂಕ ಮಧ್ಯಾಹ್ನ 3ರಿಂದ ಅಮ್ಮನವರ ರಥೋತ್ಸವ ದೇವಾಲಯದ ಹಿಂಭಾಗದಲ್ಲಿ ನಡೆಯಲಿದೆ ದಿನಾಂಕ 11/5/2025 ನೇ ಭಾನುವಾರ ಸಿಡಿ ಮತ್ತು ಹೊಕಳಿ ಉತ್ಸವ ಈ ಕಾರ್ಯಕ್ರಮ ದೇವಾಲಯದ ಮುಂಭಾಗದ ಕೆರೆಯ ಆವರಣದಲ್ಲಿ ನೆರವೇರಲಿದೆ.
ಸಮಸ್ತ ಭಕ್ತಾದಿಗಳಿಗೆ ಆದರದ ಸ್ವಾಗತ ಆಡಳಿತ ಮಂಡಳಿ ಇವರಿಂದ ಹಾಗೂ ಊರಿನ ಗ್ರಾಮಸ್ಥರ ಮೇರೆಗೆ ಮತ್ತು ಭಕ್ತಾದಿಗಳ ಹಾಗೂ ದಾನಿಗಳ ಪರವಾಗಿ ಹಾಗೂ ಪಾಂಡಾಮಟ್ಟಿ ಗ್ರಾಮದ ವತಿಯಿಂದ ಮತ್ತು ಈ ಜಾತ್ರೆಗೆ ಪತ್ರಿಕಾ ಮಾಧ್ಯಮ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಅಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ತಾಲೂಕ ಅಧ್ಯಕ್ಷರು ಡಿ.ಗಿರೀಶ್ ಹೂದಿಗೆರೆ ಆಗು ಹೂದಿಗೆರೆ ಡಿ.ರಮೇಶ್ ಸುಸ್ವಾಗತವನ್ನು ಕೋರುತ್ತಿದ್ದೇವೆ.
ಶ್ರೀದೇವಿಯ ಭಕ್ತಾದಿಗಳು ಪೂಜೆ ಇತ್ಯಾದಿ ಹರಕೆ ಕಾಣಿಕೆ ಒಪ್ಪಿಸುವವರು ದೇವಸ್ಥಾನದ ಸಮಿತಿಯವರಲ್ಲಿ ಕೊಟ್ಟು ರಶೀದಿ ಪಡೆಯತಕ್ಕದ್ದು.
ವರದಿ : ರಾಜು ಮುಂಡೆ




