ಚೆನ್ನೈ: ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 155 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿ ಎದುರಾಳಿ ತಂಡಕ್ಕೆ 156 ರನ್ ಗಳ ಗೆಲುವಿನ ಗುರಿ ನೀಡಿದೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ತನ್ನ ಪ್ರಮುಖ ಬ್ಯಾಟರುಗಳ ನೀರಸ ಪ್ರದರ್ಶನದಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ ಸೊನ್ನೆಗೆ ಔಟಾದ ನಂತರ ಯಾವುದೇ ಬ್ಯಾಟರುಗಳು ಎದುರಾಳಿ ಬೌಲರುಗಳ ಮೇಲೆ ಒತ್ತಡ ಹಾಕಲು ವಿಫಲರಾದರು. ತಿಲಕ್ ವರ್ಮಾ 31, ಸೂರ್ಯ ಕುಮಾರ ಯಾದವ್ 29 ಸ್ವಲ್ಪ ಮಟ್ಟಿಗೆ ಹೋರಾಟ ನೀಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಚೆನ್ನೈ ಪರ ನೂರ ಅಹ್ಮದ್ 4 ಓವರುಗಳಲ್ಲಿ ಕೇವಲ 18 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಪಡೆದು ಮುಂಬೈ ಇಂಡಿಯನ್ಸ್ ತಂಡವನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಖಲೀಲ ಅಹ್ಮದ ಅವರು ನೂರ ಅಹ್ಮದ್ ಗೆ ಉತ್ತಮ ಬೆಂಬಲ ನೀಡಿ 2 ವಿಕೆಟ್ ತೆಗೆದರು.