ಚೆನ್ನೈ: ಸರ್ವಾಂಗೀಣ ಪ್ರದರ್ಶನ ತೋರಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 25 ನೇ ಲೀಗ್ ಪಂದ್ಯದಲ್ಲಿ ಅತ್ಯಂತ ಸುಲಭ ಗೆಲುವು ಪಡೆದು ಕೇಕೆ ಹಾಕಿತು.
ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೀರಾ ನೀರಸ ಪ್ರದರ್ಶನ ತೋರಿ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ ಕೇವಲ 103 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳಿಂದ ಹಾಗೂ ಇನ್ನು 9.5 ಓವರುಗಳು ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಅಂದರೆ 10.1 ಓವರುಗಳಲ್ಲೇ ಜಯದ ದಡ ತಲುಪಿತು.
ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೂರನೇ ಗೆಲುವಿನೊಂದಿಗೆ 6 ಅಂಕಗಳನ್ನು ಸಂಪಾದಿಸಿತು. ಅಷ್ಟೇ ಅಲ್ಲದೇ ಉತ್ತಮ ರನ್ ಸರಾಸರಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿ ಕಿಂಗ್ಸ್ ತಂಡವನ್ನು ಕ್ರಮವಾಗಿ 4 ಹಾಗೂ 5 ನೇ ಸ್ಥಾನಕ್ಕೆ ದೂಡಿ ತಾನು ಮೂರನೇ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು.
ಸ್ಕೋರ್ ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 9 ವಿಕೆಟ್ ಗೆ 103
( ನರೇನ್ 13 ಕ್ಕೆ 3, ಹರ್ಷಿತ್ ರಾಣಾ 16 ಕ್ಕೆ 2)
ಕೋಲ್ಕತ್ತಾ ನೈಟ್ ರೈಡರ್ಸ್ 10.1 ಓವರುಗಳಲ್ಲಿ 2 ವಿಕೆಟ್ ಗೆ 107
ನರೇನ್ 44 ( 18 ಎಸೆತ, 2 ಬೌಂಡರಿ, 5 ಸಿಕ್ಸರ್)
——ಪಂದ್ಯ ಶ್ರೇಷ್ಠ: ಸುನೀಲ್ ನರೇನ್