ಚೆನ್ನೈ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ 49 ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ ಗಳ ಗೆಲುವು ಸಂಪಾದಿಸಿತು.
ಇಲ್ಲಿನ ಎಂ.ಎ ಚಿದಂಬಂರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.2 ಓವರುಗಳಲ್ಲಿ 190 ರನ್ ಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಇದಕ್ಕೆ ಪ್ರತಿಯಾಗಿ ಆಡಿದ ಪಂಜಾಬ್ ಕಿಂಗ್ಸ್ ತಂಡವು 19.4 ಓವರುಗಳಲ್ಲಿ 6 ವಿಕೆಟ್ ಗೆ 194 ರನ್ ಗಳಿಸಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ 13 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಸ್ಕೋರ್ ವಿವರ:
ಚೆನ್ನೈ ಸೂಪರ್ ಕಿಂಗ್ಸ್ 19.2 ಓವರುಗಳಲ್ಲಿ 190
ಶ್ಯಾಮ್ ಕರನ್ 88 ( 47 ಎಸೆತ, 9 ಬೌಂಡರಿ, 4 ಸಿಕ್ಸರ್), ಡೆವಲ್ಡ ಬ್ರೇವಿಸ್ 32 ( 26 ಎಸೆತ, 2 ಬೌಂಡರಿ, 1 ಸಿಕ್ಸರ್)
ಚಹಲ್ 32 ಕ್ಕೆ 4.
ಪಂಜಾಬ್ ಕಿಂಗ್ಸ್ 19.4 ಓವರುಗಳಲ್ಲಿ 6 ವಿಕೆಟ್ ಗೆ 194
ಶ್ರೇಯಸ್ ಅಯ್ಯರ 72 ( 41 ಎಸೆತ, 5 ಬೌಂಡರಿ, 4 ಸಿಕ್ಸರ್ ), ಸಿಮ್ರನ್ ಸಿಂಗ್ 54 ( 36 ಎಸೆತ, 5 ಬೌಂಡರಿ, 3 ಸಿಕ್ಸರ್)
ಖಲೀಲ ಅಹ್ಮದ 28 ಕ್ಕೆ 2 . ಪಂದ್ಯ ಶ್ರೇಷ್ಠ: ಶ್ರೇಯಸ್ ಅಯ್ಯರ




