ಬೆಂಗಳೂರು: ರಾಜ್ಯ ಸರ್ಕಾರ ಅಭಿವೃದ್ಧಿಯನ್ನು ಬಿಟ್ಟು, ತಲೆ ಬೋಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ನವರು ಹೆಣ್ಣು ಮಕ್ಕಳಿಗೆ ಫ್ರೀ ಬಸ್ ಕೊಟ್ಟು ಗಂಡಸರಿಗೆ ಬರೆ ಹಾಕುತ್ತಿದ್ದೀರಿ. ಹೀಗಾಗಿ ಜನರ ಬಳಿ ಕ್ಷಮಿಸಿಬಿಡಿ ಎಂದು ಕೇಳಲು ಬಂದಿದ್ದೇವೆ ಎಂದು ಹೇಳಿದರು.
ಗ್ಯಾರಂಟಿ ಕಾರಣದಿಂದ ಜನರು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಹಾಲು , ವಿದ್ಯುತ್ , ಟ್ಯಾಕ್ಸ್ ದರ, ರಿಜಿಸ್ಟ್ರೆಷನ್ ಫೀಸ್‌ಗ ಹೆಚ್ಚಳವಾಗಿದೆ. ಅಭಿವೃದ್ಧಿಯನ್ನು ಬಿಟ್ಟು, ಕಾಂಗ್ರೆಸ್ ಸರ್ಕಾರ ತಲೆ ಬೋಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನುಮುಂದೆ ಮುಂದುವರಿಸಲು ಸಾಧ್ಯವಿಲ್ಲ. ಆ ಕಾರಣದಿಂದ ಬಸ್ ದರ ಏರಿಸಲೇ ಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.