ಚಿಕ್ಕೋಡಿ:ನಾಳೆ ರವಿವಾರ ಏಪ್ರಿಲ್ 20 ರಂದು 12 ಗಂಟೆಗೆ ಚಿಕ್ಕೋಡಿಯ ಅರಡಿ ಮೈದಾನದಲ್ಲಿ ಹಣಬರ ಸಮಾಜದ ಸಮಾವೇಶ ನಡೆಯಲಿದ್ದು ಈ ಸಮಾವೇಶಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಹಾಗೂ ಶಾಸಕರು, ಎಲ್ಲ ಮುಖಂಡರು ಸೇರಿದಂತೆ 30 ಸಾವಿರ ಸಮಾಜ ಬಾಂಧವರು ಆಗಮಿಸಿಲಿದ್ದಾರೆ ಎಂದು ಚಿಕ್ಕೋಡಿ ಸದಲಗಾ ಗಣೇಶ ಹುಕ್ಕೇರಿ ತಿಳಿಸಿದರು.
ಚಿಕ್ಕೋಡಿ ನಗರದ ಆರ್. ಡಿ. ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ಕರ್ನಾಟಕ ಮಹಾರಾಷ್ಟ್ರದ ಗಡಿಭಾಗದ ನಗರವಾಗಿದ್ದು ಇಲ್ಲಿ ರಾಜ್ಯಮಟ್ಟ ಹಣಬರ ಯಾದವ ಸಮಾಜದ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.
ನಾನು, ಬೆಳಗಾವಿ ಜಿಲ್ಲೆಯ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ , ಈ ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ ಕೈಜೋಡಿಸುತ್ತೇವೆ ಎಂದರು.
ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ ಮಾತನಾಡಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಂಧವರು ಆಗಮಿಸಬೇಕು. ಚಿಕ್ಕೋಡಿಯಲ್ಲಿ ಆಗುವ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಸಿಗುತ್ತದೆ ಎಂದರು.
ಕರ್ನಾಟಕ ರಾಜ್ಯ ಗೊಲ್ಲ ಯಾದವ ಹಣಬರ ಸಮಾಜ ಸಂಘದ ಅಧ್ಯಕ್ಷ ಹಾಗೂ ಎಂಎಲ್‌ಸಿ ಡಿ ಟಿ ಶ್ರೀನಿವಾಸ್ ಮಾತನಾಡಿ ಗೊಲ್ಲ ಯಾದವ ಹಣಬರ ಸಮಾಜ ಸಂಘ ಪ್ರಾರಂಭವಾಗಿ 100 ವರ್ಷ ವಾಗಿದು, ಇದರ ಶತ್ಮಾನೋತ್ಸವ ಕಾರ್ಯಕ್ರಮ ಹಾಗೂ ಶ್ರೀಗಳ ಹದಿನಾರನೇ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು. ವಿಠ್ಠಲ ಖೋತ ಅವರು ಶ್ರೀ ಕೃಷ್ಣ ಮಠ ನಿರ್ಮಾಣಕ್ಕೆ 10 ಗುಂಟೆ ಜಾಗ ನೀಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ಚಿಕ್ಕೋಡಿಯಲ್ಲಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ರವಿವಾರ ದಿನಾಂಕ 20 ರಂದು 12:30 ಗಂಟೆಗೆ ಎಲ್ಲರೂ ಕಾರ್ಯಕ್ರಮ ಸ್ಥಳಕ್ಕೆ ಬರಬೇಕು. ಊಟದ ವ್ಯವಸ್ಥೆ ಮಾಡಲಾಗಿದ್ದು ಪ್ರಾರಂಭದಲ್ಲಿ ಮಹಾ ಸ್ವಾಮೀಜಿಗಳ ಪಟ್ಟಾಭಿಷೇಕ ಹಾಗೂ ಇನ್ನಿತರ ಗಣ್ಯರ ಸತ್ಕಾರ ಕಾರ್ಯಕ್ರಮ ನಡೆಯಲಿದೆ. ಆನಂತರ ಎರಡು ಗಂಟೆಗೆ ಮುಖ್ಯಮಂತ್ರಿ ಅವರ ಉಪಸ್ಥಿತಿಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು ಎಂದು ಹೇಳಿದರು.
ಅದೇ ರೀತಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ,ಸಚಿವ ಭೈರತಿ ಸುರೇಶ, ಬಿ ಆರ್ ಪಾಟೀಲ, ಸಂತೋಷ್ ಲಾಡ್ ಸೇರಿದಂತೆ 10 ಸಚಿವರು ಹಾಗೂ ಶಾಸಕರು ಸಂಸದರು ಪಕ್ಷಾತೀತವಾಗಿ ಎಲ್ಲ ಮುಖಂಡರು ಭಾಗಿಯಾಗಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ವಿಠ್ಠಲ ಖೋತ, ಜಿಲ್ಲಾಧ್ಯಕ್ಷ ಶೀತಲ ಮುಂಡೆ,ಪುರಸಭೆ ಉಪಾಧ್ಯಕ್ಷ ಇರ್ಫಾನ ಬೇಪಾರಿ, ಪುರಸಭೆ ಸದಸ್ಯ ಗುಲಾಬಹುಸೇನ ಬಾಗವಾನ, ಭರತ್ ಜುಗಳೆ, ಪಿ ಐ ಕೋರೆ , ರಾಜೇಶ ಪಾಟೀಲ, ಮಹಾದೇವ ಕರೋಲೆ, ಸಚಿನ ಖೋತ, ಲಕ್ಷ್ಮೀ ನಾರಾಯಣ ಶಶಿಕುಮಾರ, ಶ್ರೀನಿವಾಸ್, ಬಿಎಂ ಕೃಷ್ಣಪ್ಪ, ನಿರಂಜನ, ಸುಧಾಮ. ಖಾಢ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ