ಬೆಂಗಳೂರು : ಅಂದಿನ ಪ್ರದಾನ ಮಂತ್ರಿ ಇಂದಿರಾಗಾಂಧಿ ಕಾಲದಲ್ಲಿ ಚಿಕ್ಕಸಂದ್ರ ಕಾಲೋನಿಯಲ್ಲಿ ನಮಗೆ ಹಕ್ಕುಪತ್ರ ನೀಡಿದ್ದಾರೆ. ಆದರೆ ಜಾಗವನ್ನು ಕಬಳಿಸುವ ಹುನ್ನಾರದಿಂದ ಬೇರೆ ಸರ್ವೇ ನಂಬರ್ ಅಂತಾ ಹೇಳಿ ಪಕ್ಕದ ಜಾಗದ ಮುನಿಸ್ವಾಮಯ್ಯ ಅವರ ಮಗ ಜನಾರ್ಧನ್ ಈ ಜಾಗ ನಮ್ಮದ್ದು ಎಂದು ನಮ್ಮ ಆರ್ ಕುಟುಂಬದ ಸದಸ್ಯರ ಮೇಲೆ ಗುಂಡಾಗಿರಿ ದಬ್ಬಾಳಿಕೆ ಬಾಯಿಗೆ ಬಂದಂತೆ ಅವ್ಯಚ್ ಶಬ್ದ ಭಯ ಹಾಕುತ್ತಿದ್ದಾನೆ ಎಂದು
ಚಿಕ್ಕಸಂದ್ರ ಕಾಲೋನಿಯ ನಿವಾಸಿ ಮಂಜಮ್ಮಆಕ್ರೋಶ ವ್ಯಕ್ತಪಡಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ಚಿಕ್ಕಸಂದ್ರ ಕಾಲೋನಿಯಲ್ಲಿ ಸರ್ವೇ ನಂ.3ರಲ್ಲಿ ಕಳೆದ 40 ವರ್ಷಗಳಿಂದ ನಾವು 6 ಕುಟುಂಬಗಳು ಇಲ್ಲೇ ಜೀವನ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ನಮ್ಮ ಮನೆ ಬಿದ್ದು ಹಾಳಾಗಿದ್ದು ಮನೆ ಕಟ್ಟಿಕೊಳ್ಳಲು ಹೋದರೆ ಮುನಿಸ್ವಾಮಯ್ಯನ ಮಗ ಜನಾರ್ಧನ್ ಇದು ಸರ್ವೇ ನಂಬರ್ 4 ನಮ್ಮದ್ದು ನೀವು ಜಾಗ ಖಾಲಿ ಮಾಡಿ ಎಂದು ತೊಂದರೆ ಕೊಡುತ್ತಿದ್ದಾನೆ. 2018 ರಲ್ಲಿ ಪಹಣಿಯಲ್ಲಿ ಅವರ ಹೆಸರು ಸೇರಿಸಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ .ನಮಗೆ ಸರ್ಕಾರವೇ ಹಕ್ಕುಪತ್ರ ನೀಡಿ ವಿದ್ಯುತ್ ಮತ್ತು ನೀರಿನ ಬಿಲ್ ಕೂಡಾ ನಮ್ಮ ಹೆಸರಿಗೆ ಸರ್ಕಾರ ಹಕ್ಕು ಪತ್ರ ಇದ್ದರು.
ಜನಾರ್ಧನ್ ಖಾಲಿ ಮಾಡಿಸಿ ನಮ್ಮನ್ನು ಬೀದಿಗೆ ತರುವ ಕುತಂತ್ರ ನಡೆಸಿದ್ದಾನೆ ಈ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋನೆ ಆಗಿಲ್ಲಾ . ಎಲ್ಲರೂ ಒಂದಾಗಿ ನಮ್ಮವರೇ ನಮ್ಮ ನೆರವಿಗೆ ಬರುತ್ತಿಲ್ಲ. ಪೊಲೀಸರಿಗೆ ನಾವು ದೂರು ಕೊಡಲು ಹೋದರೆ ನಮ್ಮ ದೂರು ಸ್ವೀಕರಿಸುತ್ತಿಲ್ಲಾ. ಕಾಣದ ಕೈಗಳು ಸೇರಿದಂತೆ ನಮಗೆ ತೊಂದರೆ ಕೊಡುತ್ತಾರೆ’, ಎಂದು ಮಂಜಮ್ಮ ಕಣ್ಣಿರು ಹಾಕುತ್ತಾ ತಮ್ಮ ಅಳಲು ತೋಡಿಕೊಂಡರು.
ಚಿಕ್ಕಸಂದ್ರದ ಗ್ರಾಮದ ಮಂಜಮ್ಮ, ಗಜೇಂದ್ರ, ಕೃಷ್ಣಪ್ಪ, ಹನುಮಯ್ಯ, ಜಯಮ್ಮ ಇತರರು ಇಲ್ಲೇ ಜೀವನ ರೂಪಿಸಿಕೊಂಡಿದ್ದು ಅವರಿಗೆ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ನ್ಯಾಯ ಕೊಡಿಸಲು
ಮುಂದಾಗಬೇಕು ಎಂದು ಕುಟುಂಬ ಸಮೇತ ಮಾಧ್ಯಮದವರ ಮುಂದೆ ಒತ್ತಾಯಿಸಿದರು.
ವರದಿ: ಅಯ್ಯಣ್ಣ ಮಾಸ್ಟರ್