ಚಿಕ್ಕೋಡಿ: ತಾಲ್ಲೂಕಿನ ಚಂದೂರ ಸೈನಿಕ ಟಾಕಳಿ ಗ್ರಾಮಗಳ ನಡುವಿನ ಕೃಷ್ಣಾ ನದಿಗೆ ಅಡ್ಡಲಾಗಿ ₹27 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಪ್ರಕಾಶ ಅಣ್ಣಾ ಹುಕ್ಕೇರಿ ವೀಕ್ಷಿಸಿದರು.
ಈ ಮಹತ್ವದ ಸೇತುವೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಸುಗಮಗೊಳಿಸುವುದರ ಜೊತೆಗೆ ಕೃಷಿ, ವ್ಯಾಪಾರ ಹಾಗೂ ನಾಗರಿಕರ ನಿತ್ಯ ಸಂಚಾರಕ್ಕೆ ನೂತನ ಅನುವು ಮಾಡಿಕೊಡಲಿದೆ. ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಶಾಸಕರು, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕ ಬಳಕೆಗೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ