‘ದಿ ಲಯನ್ ಕಿಂಗ್’ ಖ್ಯಾತಿಯ ಬಾಲನಟಿ ಇಮಾನಿ ದಿಯಾ ಸ್ಮಿತ್ ಸಾವನ್ನಪ್ಪಿದ್ದು, ಪ್ರಿಯಕರನಿಂದಲೇ ಹತ್ಯೆಗೀಡಾಗಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ.
ದಿ ಲಯನ್ ಕಿಂಗ್ ನಲ್ಲಿ ಯಂಗ್ ನಲಾ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಬ್ರಾಡ್ವೇ ಬಾಲನಟಿ ಇಮಾನಿ ದಿಯಾ ಸ್ಮಿತ್ 25 ನೇ ವಯಸ್ಸಿನಲ್ಲಿ ನಿಧನರಾದರು.
ಡಿಸೆಂಬರ್ 21 ರಂದು ನ್ಯೂಜೆರ್ಸಿಯ ಎಡಿಸನ್ನಲ್ಲಿರುವ ಮನೆಯಲ್ಲಿ ಚಾಕು ಇರಿತಕ್ಕೊಳಗಾದ ನಟಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು . ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಆಕೆಯ ಗೆಳೆಯ ಜೋರ್ಡಾನ್ ಡಿ. ಜಾಕ್ಸನ್-ಸ್ಮಾಲ್ ಅವರನ್ನು ಬಂಧಿಸಿದ್ದಾರೆ, ಅವರ ಮೇಲೆ ಪ್ರಥಮ ಹಂತದ ಕೊಲೆ ಆರೋಪ ಹೊರಿಸಲಾಗಿದೆ.ಸ್ಮಿತ್ ಅವರಿಗೆ 3 ವರ್ಷದ ಮಗ ಕೂಡ ಇದ್ದಾರೆ.
ಇಮಾನಿ ಅವರ ಚಿಕ್ಕಮ್ಮ ಗೋಫಂಡ್ಮಿಯಲ್ಲಿ ಅಂತ್ಯಕ್ರಿಯೆಯ ವೆಚ್ಚಗಳು, ಅವರ ಕುಟುಂಬಕ್ಕೆ ಚಿಕಿತ್ಸೆ ಮತ್ತು ಅವರ ಮಗು ಮತ್ತು ನಾಯಿಯ ಆರೈಕೆಗಾಗಿ ದೇಣಿಗೆ ನೀಡುವಂತೆ ವಿನಂತಿಸುವ ಪೇಜ್ ಓಪನ್ ಮಾಡಿದ್ದಾರೆ. ಇಮಾನಿ ಅವರ ನಿಧನಕ್ಕೆ ಅವರ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ.




