Ad imageAd image

ಪ್ರೀತಿ ವಿಶ್ವಾಸದಿಂದ ಬೆಳೆಸಿದಾಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ: ಜಿ ಎ. ಖೋತ್

Bharath Vaibhav
ಪ್ರೀತಿ ವಿಶ್ವಾಸದಿಂದ ಬೆಳೆಸಿದಾಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ: ಜಿ ಎ. ಖೋತ್
WhatsApp Group Join Now
Telegram Group Join Now

ಅಥಣಿ: ಪಾಲಕರು ಮಕ್ಕಳಿಗೆ ಶಿಕ್ಷಣ ಜೊತೆ ಒಳ್ಳೆ ಸಂಸ್ಕಾರ ಕೊಡಬೇಕು ಅವರಿಗೆ ಓದಿನಲ್ಲಿ ಒತ್ತಡ ನೀಡಬಾರದು ಅವರಿಗೆ ಪ್ರೀತಿ ವಿಶ್ವಾಸದಿಂದ ಬೆಳೆಸಿದಾಗ ಮಾತ್ರ ಮಕ್ಕಳು ಎತ್ತರ ಮಟ್ಟಿಗೆ ಬೆಳೆಯಲು ಮತ್ತು ಸಾಧನೆ ಮಾಡಲಿಕ್ಕೆ ಸಹಕಾರಿಯಾಗುತ್ತದೆ ಎಂದು ಮುಖ್ಯ ಅತಿಥಿಗಳಾದ ಜಿ ಎ. ಖೋತ್ ಅವರು ಹೇಳಿದರು.

ಅವರು ಅಥಣಿ ನಗರದ ಜೆ. ಇ ಸಂಸ್ಥೆಯ ಜಾಧವಜಿ ಆನಂದಜಿ ಹಿರಿಯ ಮಾಧ್ಯಮಿಕ ಶಾಲೆಯ ವಾರ್ಷಿಕ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಸಮಾರಂಭ ಹಾಗೂ ಸರಸ್ವತಿ ದೇವಿಯ ಪೂಜೆದೊಂದಿಗೆ ಚಾಲನೆ ನೀಡಿ ಮಾತನಾಡಿದರು.

ನಂತರ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಅನಿಲರಾವ್ ಬಾ ದೇಶಪಾಂಡೆ ಅವರು ಮಾತನಾಡಿ ಪುಸ್ತಕ ಓದುವ ಹವ್ಯಾಸ ಮಕ್ಕಳು ಈಗಿನಿಂದಲೇ ರೂಡಿ ಮಾಡಿಕೊಳ್ಳುವ ಹವ್ಯಾಸ ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಉತ್ತಮವಾದ ಸಾಧನೆಗೆ ಸಹಕಾರಿಯಾಗುತ್ತದೆ ಇಲ್ಲಿ ಕಲಿಯುವಂತಹ ಮಕ್ಕಳು ಶಾಲೆ ಕೀರ್ತಿ ತರಬೇಕು. ಶಾಲೆಯು ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಶಾಲೆಯ ಕೀರ್ತಿ ಹೆಚ್ಚಿಸಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ರಾಮ್ ಬಿ ಕುಲಕರ್ಣಿ ಕಾರ್ಯಧ್ಯಕ್ಷರು ಉಪಸ್ಥಿತರಿದ್ದರು.ಹಾಗೂ ಜಿ ಆಯ್ .ಪಾಟೀಲ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.ಅದರಂತೆ ಶ್ರೀಮತಿ ಆರ್ ವಾಯ್ ಪೋಂಡೆ ಅಧ್ಯಕ್ಷರು ವಾರ್ಷಿಕ ಸ್ನೇಹ ಸಮ್ಮೇಳನ ೨೦೨೪/೨೫ ಸಾಲಿನ ವರ್ಷದ ವರದಿಯನ್ನು ಹೇಳಿದರು. ವೇದಿಕೆ ಮೇಲಿನ ಗಣ್ಯಮಾನ್ಯರಿಂದ

ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಹಣ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು.ಕು. ಪೂಜಾರಿ ಇತನು ಈ ವರ್ಷದ ಆದರ್ಶ ವಿಧ್ಯಾರ್ಥಿ ಮತ್ತು ಕು.ವ್ಯೆಶ್ನವಿ ಕವಟೆಕರ ಆದರ್ಶ ವಿಧ್ಯಾರ್ಥಿನಿ ಎಂದು ಮುಖ್ಯ ಅತಿಥಿಗಳು ಸನ್ಮಾನಿಸಿದರು. ಮಕ್ಕಳ ವಿವಿಧ ರೀತಿಯ ಸಂಸ್ಕೃತ ಕಾರ್ಯಕ್ರಮವು ಜರುಗಿದವು.ಹಾಗೂ ಶ್ರೀ ಎಸ್ ಎನ್ ಕಾಂಬಳೆ ಮತ್ತು ಶ್ರೀಮತಿ ಕೆ ಎಸ್ ಅಂಬಿ ಅವರು ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಪಾಲಕರು ಸಿಬ್ಬಂದಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!