Ad imageAd image

ಪ್ರಥಮ ಪಾಲಕರ ಸಭೆ – ಮಕ್ಕಳ ಶೈಕ್ಷಣಿಕ ಪ್ರಗತಿ ಚರ್ಚೆ

Bharath Vaibhav
ಪ್ರಥಮ ಪಾಲಕರ ಸಭೆ – ಮಕ್ಕಳ ಶೈಕ್ಷಣಿಕ ಪ್ರಗತಿ ಚರ್ಚೆ
WhatsApp Group Join Now
Telegram Group Join Now

ರಾಮದುರ್ಗ: ತಾಲೂಕಿನ ಸುರೇಬಾನ-ಮನಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಾಲಕರ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರವೀಣಕುಮಾರ ಕೋಟಿ ಅವರು ಪ್ರಾಸ್ತಾವಿವಾಗಿ ಮಾತನಾಡಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಚಟುವಟಿಕೆ, ಸ್ಪರ್ಧೆಗಳು, ವಿದ್ಯಾರ್ಥಿಗಳ ಸಾಧನೆ, ಫಲಿತಾಂಶ,ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದರ ಕುರಿತು ವಿವರವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಕರಗಿ ಉಪಸ್ಥಿತರಿದ್ದ ರಮೇಶ ಹಳ್ಳಿ ಅವರು ಮಾತನಾಡಿ ಮಕ್ಕಳು ಉಪನ್ಯಾಸಕರು ಹೇಳಿದಂತೆ ಕೇಳಬೇಕು, ಇನ್ನು ಸೋಶಿಯಲ್ ಮೀಡಿಯಾ ಇವುಗಳನ್ನು ಎಷ್ಟು ಬೇಕು ಅಷ್ಟೇ ಬಳಕೆ ಮಾಡಬೇಕು. ಅತೀಯಾಗಿ ಇವಗಳ ಬಳಕೆ ಮಾಡದಂತೆ ಆದಷ್ಟು ದೂರ ವಿರುವದರಿಂದ ಉತ್ತಮ ವಾದ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಗುತ್ತದೆ ಪಾಲಕರ ಸಭೆಗಳು ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಭಾವನಾತ್ಮಕ ಪ್ರಗತಿಯನ್ನು ಚರ್ಚಿಸಲು ಅವಕಾಶವನ್ನು ಒದಗಿಸಿ ಮಕ್ಕಳ ಮೇಲೆ ಗಮನ ಹರಿಸಲು ಸಭೆಯನ್ನು ಕರೆದಿರುವುದು ಇದೊಂದು ಉತ್ತಮವಾದ ವೇಧಿಕೆ ಇದಾಗಿದೆ ಎಂದರು.

ಇದೇ ವೇಳೆ ಮತ್ತೊರ್ವ ಪಾಲಕರು ಮಾತನಾಡಿ ಇಲ್ಲಿನ ಉಪನ್ಯಾಸಕರು ನಮಗೆಲ್ಲ ಉತ್ತಮವಾದ ರೀತಿಯಲ್ಲಿ ಭೋದನೆ ಮಾಡುತ್ತಿದ್ದಾರೆ ಎಲ್ಲ ಉಪನ್ಯಾಸಕರು ನಮ್ಮ ಬಗ್ಗೆ ಗಮನ ಹರಿಸಿ ಉತ್ತಮವಾದ ಫಲಿತಾಂಶ ಬರುವಂತೆ ಪ್ರೆರೆಪಣೆ ನೀಡುತ್ತಾರೆ ಅಲ್ಲದೇ ಉತ್ತಮವಾದ ವಾತಾವರಣವಿದೆ ಎಂದು ಮಕ್ಕಳು ತಿಳಿಸಿರುವ ಬಗ್ಗೆ ತುಂಬಾ ಖುಷಿ, ಹೆಮ್ಮೆ ಎನಿಸುತ್ತಿದೆ ಎಂದರು.

ಉಪನ್ಯಾಸಕರಾದ ರಮೇಶ ಮೋಟೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಶಿಕ್ಷಣ ಅತೀ ಮುಖ್ಯವಾಗಿದೆ. ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಸಮಾಜ ಇವುಗಳು ಏಕಮುಖವಾಗಿರಬೇಕು. ಮಕ್ಕಳು ಬಗ್ಗೆ ಬೇಕುಬೇಡಗಳನ್ನು ಪಾಲಕರು ಗಮನ ಹರಿಸುವುದು ಅಷ್ಟೇ ಮುಖ್ಯ. ಒಳ್ಳೆಯ ಶಿಕ್ಷಣ ಪಡೆಯುವದರಿಂದ ಉತ್ತಮವಾದ ಸಮಾಜ ನಿರ್ಮಾಣ ಸಾಧ್ಯ. ಅಂಕಗಳಿಗಿಂತ ಮಾನವೀಯತೆ ವರ್ತನೆ ಸಮಾಜದಲ್ಲಿ ಮುಖ್ಯವಾಗಿ ಬೇಕಾಗುತ್ತದೆ.ಶಿಕ್ಷಣ ಪಡೆಯುವದಕ್ಕೆ ಬಡವರು ಶ್ರೀಮಂತರು ಅನ್ನುವುದು ಮುಖ್ಯವಲ್ಲ ಎಲ್ಲ ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶ ಪಡೆಯಬೇಕು ಎನ್ನುವುದು ನಮ್ಮ ಗುರಿಯಾಗಿದೆ ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರೂಪಾ ಯಲಗೋಡ ಅವರು ಮಾತನಾಡಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ ಕಾರಣ ಇಲ್ಲಿನ ಉಪನ್ಯಾಸಕರ ಶ್ರಮ ಆಗಿದೆ ಇದರಿಂದ ನಮಗೆಲ್ಲ ಖುಷಿ, ಹೆಮ್ಮೆಯ ವಿಚಾರವಾಗಿದೆ.ಜೊತೆಗೆ ಪಾಲಕರಾದ ನಾವು ಮಕ್ಕಳ ಬಗ್ಗೆ ಗಮನ ಹರಿಸಿ ಅವರನ್ನು ಉತ್ತಮವಾದ ವಿದ್ಯಾಭ್ಯಾಸ ಮಾಡಲು ಪ್ರೆರೇಪಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಶಿಕ್ಷಣ ಅನ್ನುವುದು ಬಡತನ ನಿವಾರಣೆ ಮಾಡುತ್ತದೆ, ಎಲ್ಲ ಮಕ್ಕಳು ಉತ್ತಮವಾದ ರೀತಿಯಲ್ಲಿ ಬೆಳೆಯಲು, ಉನ್ನತ ಸ್ಥಾನವೇರಲು ನಾವು ಅವರಿಗೆ ಕೈಜೋಡಿಸಿ ಸಹಕಾರ ನೀಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ ಎಂದರು.

ವೇಧಿಕೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ನಾಗರಾಜ ಹಕ್ಕೇರ ಅವರು ಮಾತನಾಡಿ ಎಲ್ಲ ಮಕ್ಕಳ ಬಗ್ಗೆ ಕಾಳಜಿವಹಿಸಿ ಅವರಿಗೆ ನಾವು ಉತ್ತಮವಾದ ರೀತಿಯಲ್ಲಿ ಭೋದನೆ ಮಾಡುತ್ತಿದ್ದೇವೆ. ಜೊತೆಗೆ ನಿಮ್ಮ ಸಹಕಾರ ನಮಗೆಲ್ಲ ಖುಷಿ ತಂದಿದೆ ಉತ್ತಮವಾದ ಫಲಿತಾಂಶ ತರುವುದು ನಮ್ಮ ಮುಖ್ಯ ಕಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರೂಪಾ ಯಲಗೋಡ, ರಮೇಶ ಹಳ್ಳಿ ಪ್ರಾಚಾರ್ಯರಾದ ನಾಗರಾಜ ಹಕ್ಕೇರ, ಉಪನ್ಯಾಸಕರಾದ ರಮೇಶ ಮೋಟೆ, ಉಪನ್ಯಾಸಕರು ಸೇರಿದಂತೆ ಪಾಲಕರು ಪಾಲ್ಗೊಂಡಿದ್ದರು.
ಈಶೇಪ್ಪ ಸರ್ ನಿರೂಪಿಸಿದರು.  ಡಾ.ಅಶ್ವಿನಿ ಟಿ ಜಿ ಸ್ವಾಗತಿಸಿದರು.  ಸಾವಿತ್ರಿ ಪಾಟೀಲ ವಂದಿಸಿದರು.

ವರದಿ: ಕುಮಾರ ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!