ಅಥಣಿ:ಮಕ್ಕಳು ಶಿಕ್ಷಣ ಜೊತೆ ಒಳ್ಳೆ ಚಟುವಟಿಕೆ ಬೆಳೆಸಿಕೊಳ್ಳುವುದರ ಜೊತೆಗೆ ಮುಂದಿನ ವ್ಯವಹಾರದ ಕುರಿತು ಮಕ್ಕಳು ಈಗಿನಿಂದಲೇ ರೂಡಿಸಿಕೊಂಡಾಗ ಮಾತ್ರ ಬದುಕು ಕಟ್ಟಲು ಸಾಧ್ಯ ಎಂದು ಶಾಲಾ ಮುಖ್ಯಪಾದ್ಯರಾದ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಲ್ .ವಿ. ತಳೆವಾಡ ಅವರು ಹೇಳಿದರು.
ಅವರು ಇಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗುಂಡದ ಲಕ್ಷ್ಮಿ ಅಥಣಿ ಗ್ರಾಮೀಣ ಶಾಲೆಯಲ್ಲಿ ಮಕ್ಕಳು ವಿವಿಧ ರೀತಿಯ ವಸ್ತು ಪ್ರದರ್ಶನ ಹಾಗೂ ಸಂತೆ ಕೂಡಿಸುವ ಹಬ್ಬವನ್ನು ಆಚರಣೆ ಮಾಡಲಾಯಿತು. ನಮ್ಮ ಶಾಲೆಯ ಮಕ್ಕಳು ವಿವಿಧ ರೀತಿಯ ತಮ್ಮ ಹೊಲದಲ್ಲಿ ಬೆಳೆಯದಂತ ಸೌತೆ ಕಾಯಿ ಬದನೆಕಾಯಿ ಮೆಂತೆಸೊಪ್ಪು ಇನ್ನಿತರ ವಸ್ತುಗಳ ಪ್ರದರ್ಶನ ಮಾಡುವುದರ ಜೊತೆಗ ನಮ್ಮ ಶಾಲೆಯಲ್ಲಿ ವಿಶೇಷವಾಗಿ ಸಂತೆ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಮಗೆ ತುಂಬಾ ಸಂತೋಷ ತಂದಿದೆ ನಮ್ಮ ಶಾಲೆಯ ಮಕ್ಕಳು ಯಾವುದರಲ್ಲಿ ಕಡಿಮೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಗೊಂಡ ಬಿಕಾಣಿ. ಎಂ. ಎಸ್ ದೊಡಮನಿ. ಅರ್ಚನಾ ಕಾಂಬಳೆ. ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಕ್ಕಳ ಪಾಲಕರು ,ಉಪಸ್ಥಿತರಿದ್ದು ಕಾರ‍್ಯಕ್ರಮ ಯಶಸ್ವಿಗೊಳಿಸಿದರು.
ವರದಿ: ಸುಕುಮಾರ ಮಾದರ