Ad imageAd image

ಮಕ್ಕಳಿಗೆ ಒಳ್ಳೆ ಶಿಕ್ಷಣ ಜೊತೆ ಒಳ್ಳೆಯ ಸಂಸ್ಕಾರ ನೀಡಬೇಕು ಶಿಕ್ಷಕಣ ಪಾತ್ರ ಅಷ್ಟೇ ಅಲ್ಲ ತಂದೆ ತಾಯಿಯ ಪಾತ್ರ ಕೂಡ ಅತ್ಯಂತ ಅವಶ್ಯಕತೆಯಾಗಿದೆ :  ಅಮರೇಶ್ವರ ಮಹಾರಾಜರು 

Bharath Vaibhav
ಮಕ್ಕಳಿಗೆ ಒಳ್ಳೆ ಶಿಕ್ಷಣ ಜೊತೆ ಒಳ್ಳೆಯ ಸಂಸ್ಕಾರ ನೀಡಬೇಕು ಶಿಕ್ಷಕಣ ಪಾತ್ರ ಅಷ್ಟೇ ಅಲ್ಲ ತಂದೆ ತಾಯಿಯ ಪಾತ್ರ ಕೂಡ ಅತ್ಯಂತ ಅವಶ್ಯಕತೆಯಾಗಿದೆ :  ಅಮರೇಶ್ವರ ಮಹಾರಾಜರು 
WhatsApp Group Join Now
Telegram Group Join Now

ಅಥಣಿ : ಮಕ್ಕಳಿಗೆ ಒಳ್ಳೆ ಶಿಕ್ಷಣ ಜೊತೆ ಒಳ್ಳೆಯ ಸಂಸ್ಕಾರ ನೀಡಬೇಕು ಶಿಕ್ಷಕಣ ಪಾತ್ರ ಅಷ್ಟೇ ಅಲ್ಲ ತಂದೆ ತಾಯಿಯ ಪಾತ್ರ ಕೂಡ ಅಷ್ಟೇ ಅತ್ಯಂತ ಅವಶ್ಯಕತೆವಾಗಿದೆ ಎಂದು ಪರಮಪೂಜ್ಯ ಅಮರೇಶ್ವರ ಮಹಾರಾಜರು ಕೌಲಗುಡ್ಡ ಅವರು ಹೇಳಿದರು.

ಅವರು ಅಥಣಿ ತಾಲೂಕಿನ ಬೇವನೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ 2024 -25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭಕ್ಕೆ ಸರಸ್ವತಿ ಫೋಟೋ ಪೂಜೆ ಹಾಗೂ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇವತ್ತಿನ ದಿನಮಾನಗಳಲ್ಲಿ ಕನ್ನಡ ಶಾಲೆಗಳು ಮುಳುಗುವ ಸ್ಥಿತಿಯಲ್ಲಿರುವಂತ ಶಾಲೆಗಳು ನಾನು ಗಮನಿಸಿದ್ದೀನಿ ಎಂದರು. ಈ ಗ್ರಾಮದ ಪಾಲಕರಲ್ಲಿ ಇರುವಂತ ಕಾಳಜಿ ಈ ಸರ್ಕಾರಿ ಶಾಲೆಯು ಉನ್ನತ ಮಟ್ಟಿಗೆ ಬೆಳೆಯಲು ಸಹಕಾರಿಯಾಗಿದೆ ಎಂದರು. ಖಾಸಗಿ ಶಾಲೆಗಿಂತ ನಮ್ಮ ಸರ್ಕಾರಿ ಶಾಲೆ ಯಾವುದರಲ್ಲಿ ಕಡಿಮೆ ಇಲ್ಲ ಎಂದು ಗ್ರಾಮದ ಎಲ್ಲರೂ ತೋರಿಸಿಕೊಟ್ಟಿದ್ದು ನನಗೆ ತುಂಬಾ ಸಂತೋಷ ತಂದಿದೆ ಹೀಗೆ ನಿಮ್ಮ ಪ್ರೀತಿ ವಿಶ್ವಾಸ. ಸಹಕಾರದೊಂದಿಗೆ ನಿಮ್ಮ ಶಾಲೆಯು ಇನ್ನಷ್ಟು ಎತ್ತರ ಮಟ್ಟಿಗೆ ಬೆಳೆಯಲಿ ಎಂದು ಶುಭ ಹಾರೈಸಿದರು.

ನಂತರ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಅಮಸಿದ್ದ ಚೌಗಲಾ ಅವರು ಮಾತನಾಡಿ ನಮ್ಮ ಶಾಲೆಯು ಕೇವಲ 1ರಿಂದ 8ನೇ ತರಗತಿವರೆಗೆ ಮಾತ್ರ ಇದ್ದು. ಮಕ್ಕಳಿಗೆ ಮುಂದಿನ ಅಭ್ಯಾಸಕ್ಕಾಗಿ 9 ಮತ್ತು 10ನೇ ತರಗತಿ ನಮ್ಮ ಊರಿನಲ್ಲಿ ಮುಂದುವರಿಸಬೇಕೆಂದು ಸರ್ಕಾರಕ್ಕೆ ನಮ್ಮ ಗ್ರಾಮಸ್ಥರ ಬೇಡಿಕೆ ಇದೆ ಎಂದರು. ಈಗಾಗಲೇ ಹಲವಾರು ಬಾರಿ ಸರಕಾರಕ್ಕೆ ಮನವಿ ಕೂಡ ಮಾಡಿದ್ದೇವೆ. ಸರ್ಕಾರ ಸ್ಪಂದನೆ ಮಾಡ್ತಾ ಇಲ್ಲ ಮಕ್ಕಳ ಮುಂದಿನ ಅಭ್ಯಾಸಕಗಿ ಬೇರೆ ಬೇರೆ ಊರುಗಳಿಗೆ ಹೋಗಿ ವಿದ್ಯೆ ಕಲಿಯುವ ಅನಿವಾರ್ಯತೆ ಇದ್ದು ಅದರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅನಾನುಕೂಲ ಆಗಿರುವುದರಿಂದ 9 ಮತ್ತು 10ನೇ ತರಗತಿ ನಮ್ಮ ಗ್ರಾಮದಲ್ಲಿ ನಡೆಸಲು ಅನುಮತಿ ಕೊಡಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ನಮ್ಮ ಮಕ್ಕಳು 9 ಮತ್ತು 10ನೇ ತರಗತಿ ಬೇರೆ ಬೇರೆ ಊರಿಗೆ ಹೋಗಿ ಕಲಿಯುವ ಪರಿಸ್ಥಿತಿ ಎದುರಾಗಿದ್ದು ಅದರಲ್ಲಿ ಹೆಣ್ಣು ಮಕ್ಕಳು ಶಾಲೆಯೂ ಬಿಡುವ ಪರಿಸ್ಥಿತಿ ಕೂಡ ಬಂದಿದೆ ಎಂದರು. ಸರ್ಕಾರ ಆದಷ್ಟು ಗಮನದಲ್ಲಿಟ್ಟುಕೊಂಡು ನಮ್ಮ ಊರಿಗೆ 9 ಮತ್ತು 10ನೇ ತರಗತಿ ಮುಂದುವರೆಯಲು ಅನುಮತಿ ಕೊಡಬೇಕೆಂದು ನಮ್ಮ ಊರಿನ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು. 9 ಮತ್ತು 10ನೇ ತರಗತಿ ಮುಂದುವರೆಯದೆ ಇದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಗೌಡಪ್ಪ ಕೋತ ಹಾಗೂ ಮಾಂತೇಶ್ ಕುಳೋಳಿ ಮತ್ತು ಪ್ರಕಾಶ್ ನಾವಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳು ತಂದೆ ತಾಯಿಯ ಪಾದ ಪೂಜೆ ಹಾಗೂ ಶಿಕ್ಷಣ ನೀಡುವ ಗುರುಗಳ ಪಾದ ಪೂಜೆ ಮಾಡಿ ಈ ಶಾಲೆಯ ಗೌರವ ಹೆಚ್ಚಿಸಿದೆ. ಮಕ್ಕಳ ಸಂಸ್ಕೃತ ಕಾರ್ಯಕ್ರಮವು ಜನರ ಮನಸ್ಸು ಸೆಳೆದವು.

ಈ ವೇಳೆ ಅಬಕಾರಿ ವೃತ್ತ ನಿರೀಕ್ಷಕರು ಮಾಂತೇಶ್ ಬಂಡಗರ. ಏನ್ ಎಂ ಹಿರೇಮಠ್. ಗ್ರಾಮದ ಹಿರಿಯರಾದ ಶಿವಾಜಿ ಯಮಗಾರ ಪ್ರಧಾನ ಗುರುಗಳಾದ ವಿಲಾಸ್ ಪೆಡ್ನೆಕರ. ಮತ್ತು ಎಸ್ ಡಿ ಎಮ್ ಸಿ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಮಕ್ಕಳು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು ಈ ಸಂದರ್ಭದಲ್ಲಿ ವೈ.ಜಿ ಚಂಬಾರ ವಾರ್ಷಿಕ ವರದಿ ಓದಿದರು. ಕುಮಾರ್ ಬಡಿಗೇರ್ ಸ್ವಾಗತಿಸಿದರು. ಪಿ.ಎಂ. ಸನದಿ ನಿರೂಪಿಸಿದರು. ಸಿದಗೋಡ ಪಾಟಿಲ ವಂದಿಸಿದರು.

ವರದಿ : ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!