ಗೋಕಾಕ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಅತ್ಯುನ್ನತ ಸಾಧನೆಗೈದ ಗೋಕಾಕ ಮತಕ್ಷೇತ್ರದ ವಿದ್ಯಾರ್ಥಿಗಳಿಗೆ ಡಾ. ಮಹಾಂತೇಶ ಕಡಾಡಿಯವರು ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನಿಸಿ ಮಾತನಾಡಿದ ಡಾ: ಮಹಾಂತೇಶ ಕಡಾಡಿಯವರು ವಿದ್ಯಾರ್ಥಿಗಳು ಅನಗತ್ಯ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೇವಲ ಓದಿನೆಡೆಗೆ ಗಮನ ನೀಡಲು ಸಲಹೆ ನೀಡಿದರು,ತಮ್ಮ ತಂದೆ ತಾಯಂದಿರ ಕನಸು ನನಸು ಮಾಡಿ, ತಂದೆ ತಾಯಂದಿರು ಹೆಮ್ಮೆ ಪಡುವಂತೆ ಮಕ್ಕಳು ನಡೆದುಕೊಳ್ಳಬೇಕೆಂದು ತಿಳಿಸಿ ಎಲ್ಲರ ಭವಿಷ್ಯ ಉಜ್ವಲ ಆಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.




