ಸಿಲಾರಕೋಟ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ
ಸೇಡಂ : ತಾಲೂಕಿನ ಸಿಲಾರಕೊಟ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ರಾಮಕೃಷ್ಣ ಅವರು ವಹಿಸಿದರು ಮತ್ತು ಈ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಗ್ರಾಮದ ಮುಖಂಡರಾದ ಶ್ರೀನಿವಾಸ್ ಡಿ ರೆಡ್ಡಿ ಪಾಟೀಲ್ ಅವರು ವಹಿಸಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಶಿಕ್ಷಣ ಕುರಿತು ಜಾಗೃತಿ ಮಾಹಿತಿ ನೀಡಿದರು.
ತದನಂತರ ಪತ್ರಕರ್ತ ವೆಂಕಟಪ್ಪ ಕೆ ಸುಗ್ಗಾಲ್ ಮಾತನಾಡಿ ಇದೇ ಶಾಲೆಯಲ್ಲಿ ವಿದ್ಯಾಬ್ಯಾಸ ಮುಗಿಸಿದ ನಾನು ಇದೇ ಶಾಲೆಯ ಕಾರ್ಯಕ್ರಮದ ಅತಿಥಿಯಾಗಿ ಬಂದಿದ್ದು ತುಂಬ ಸಂತೋಷ ನನ್ನ ವಿದ್ಯಾಭ್ಯಾಸದಲ್ಲಿ ಸಹಕಾರ ನೀಡಿದ ನನ್ನ ಎಲ್ಲಾ ನೆಚ್ಚಿನ ಶಿಕ್ಷಕರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ವೇಳೆ ರಿಬ್ಬನ್ ಪಲ್ಲಿ ಸಿ,ಆರ್,ಪಿ ಸಾಯಿಬಣ್ಣ ಪೂಜಾರಿ ಮಾತನಾಡಿದರು.
ಈ ಕಾರ್ಯಕ್ರಮದ ನಿರೂಪಣೆ ಅಥಿತಿ ಶಿಕ್ಷಕರಾದ ನರಸಿಂಹ ಅವರು ಮಾಡಿದರು.
ಸ್ವಾಗತ ಭಾಷಣ ಸಹ ಶಿಕ್ಷಕರಾದ ಅಮೃತ್ ಅವರು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಶ್ರೀನಿವಾಸ್ ರೆಡ್ಡಿ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ, ಎಸ್ಡಿಎಂಸಿ ಅಧ್ಯಕ್ಷರಾದ ರಾಮಕೃಷ್ಣ, ನರೇಶ್, ಪತ್ರಕರ್ತ ವೆಂಕಟಪ್ಪ ಕೆ ಸುಗ್ಗಾಲ್, ಶಾಲೆಯ ಮುಖ್ಯ ಗುರುಗಳಾದ ಪುಷ್ಪ ಮತ್ತು ಶಾಲೆಯ ಮುದ್ದು ಮಕ್ಕಳು ಮತ್ತು ಪಾಲಕರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




