ಐಗಳಿ: ಸಂಸ್ಕಾರ ಯೋಗ ಶಿಬಿರ ಮುಕ್ತಾಯ ಸಮಾರಂಭ ಶ್ರೀ ಗೋಳೇಶ್ವರ ಶಿವಯೋಗಿ ಗುರುದೇವ ಆಶ್ರಮ ಕಾಶಿಬೀಳಗಿಯಲ್ಲಿ ಜರುಗಿತು.
ಪರಮಪೂಜ್ಯ ಶ್ರೀ ಚನ್ಮಾಯಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರ ಹೆಮ್ಮೆ ಪಡುವಂಥದ್ದು ಅದು ಈಗಿನ ಕಾಲದಲ್ಲಿ ಮರೆಯಾಚುತಿದ್ದು ಅದನ್ನು ನಾವು ಮತ್ತೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಕಡೆಗೆ ಓಯಬೇಕಾಗಿದೆ ಈಗಿನ ಮಕ್ಕಳು ಅಕ್ಷರ ಜ್ಞಾನ ಪಡೆದು ಸಂಸ್ಕಾರದ ಜ್ಞಾನ ಮರೆಯುತ್ತಿದ್ದಾರೆ ತಾಯಿ ಯೇ ಮೊದಲ ಪಾಠಶಾಲೆಯಾಗಿದ್ದು ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕಾದರೆ ತಾಯಿಯ ಕಾರ್ಯ ಮಹತ್ವದಾಗಿದೆ ನಮ್ಮ ಮನೆ ಪರಿಸರ ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ತಮ್ಮ ಮಕ್ಕಳನ್ನು ಬರೆ ಅಕ್ಷರ ಕಡೆಗೆ ಒಯ್ಯದೆ ಸಂಸ್ಕಾರ ಕಡೆ ಒಯ್ಯಬೇಕು ಅಂದಾಗ ಮಾತ್ರ ನಮ್ಮ ಮುಂದಿನ ಜನ್ಮ ಸಾರ್ಥಕವಾಗುತ್ತದೆ ಈಗಿನ ಕಾಲದಲ್ಲಿ ಮೊಬೈಲ್ ಬಳಕೆಯಿಂದ ಎಷ್ಟೋ ಯುವಕರು ತಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮೊಬೈಲ್ ಗೋಸ್ಕರ ತಾಯಿಯನ್ನು ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಇದರಕ್ಕಿಂತ ಹೆಚ್ಚಾಗಿ ನಾವು ಏನು ಬಯಸಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ೧೨ ದಿನಗಳಿಂದ ವಿವಿಧ ಗ್ರಾಮಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗಿಯಾಗಿದ್ದಾರೆ ಅವರಿಗೆ ಶಿಕ್ಷಣದ ಜೊತೆಗೆ ನಮ್ಮ ದೇಶದ ಸಂಸ್ಕಾರವನ್ನು ಕಲಿಸಿದ್ದೇವೆ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಂದು ಸುಂದರ ಬದುಕು ಕಟ್ಟಿಕೊಳ್ಳಲು ನಾವು ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು. ಈ ಕಾಯ೯ಕ್ರಮದಲ್ಲಿ ವಿಧ್ಯಾರ್ಥಿಗಳು ಶರಣ ಸಂತರು ಲಿ.ಶ್ರೀ ಸಿದ್ದೇಶ್ವರ ದೇವರ ವೇಷ ಧರಿಸಿ ಅವರು ಜೀವನಾಧಾರಿತ ನಾಟಕ ಪ್ರದರ್ಶನ ಜನಮನ ಸೆಳೆಯಿತು ಈ ಸಂದರ್ಭದಲ್ಲಿ ಜ್ಞಾನೇಶ್ವರ್ ಸ್ವಾಮಿಗಳು ಸಿದ್ಧಾರೂಢ ಮಠ ನಾಗರಾಳ ಪ್ರವಚನ ನುಡಿಗಳಾನಾಡಿದರು.
ಉಮಾಮಹೇಶ್ವರಿ ತಾಯಿಯವರು. ಕೊಂಡಿಬಾ ಸಂತರು ದಶರಥ ಶರಣರು ಖಿಲಾರಿ ಗುರುಗಳು ಕಲಬಳಗಿ ಹಾಗೂ ಎಂ ಕೆ ಐಗಳಿ ಶಿಕ್ಷಕರು ಕಾರ್ಯಕ್ರಮದ ಸ್ಥಾಪಕರಾದ ಶ್ರೀ ಸಿದ್ದಯ್ಯ ಹಿರೇಮಠ್ ಶ್ರೀ ರುದ್ರಯ್ಯ ಹಿರೇಮಠ್ ಶ್ರೀ ಶಿಕ್ಷಕರಾದ ಶ್ರೀಶೈಲ್ ಬಿರಾದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಹಲಗಿ ವಾದನ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪುಂಡಲಿಕ ಮಾದರ ಹಾಗೂ ಉತ್ತಮ ಜಿಲ್ಲಾ ಪತ್ರಕರ್ತ ಪ್ರಶಸ್ತಿ ಪಡೆದ ಆಕಾಶ್ ಮಾದರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಹಾಗೂ ಪಾಲಕರು ಮುಂತಾದವರು ಉಪಸ್ಥಿತರಿದ್ದರು.