Ad imageAd image

ಡೊಣ್ಣೂರ್ ಗ್ರಾಮದಲ್ಲಿ “ಚಿಣ್ಣರ ಚಿಲಿಪಿಲಿ ತಾಣ” ಬಾಲಮೇಳದ ಸೊಬಗು

Bharath Vaibhav
ಡೊಣ್ಣೂರ್ ಗ್ರಾಮದಲ್ಲಿ “ಚಿಣ್ಣರ ಚಿಲಿಪಿಲಿ ತಾಣ” ಬಾಲಮೇಳದ ಸೊಬಗು
WhatsApp Group Join Now
Telegram Group Join Now

ಕಾಳಗಿ: ತಾಲೂಕಿನ ಡೊಣ್ಣೂರ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ತಾಪುರ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ “ಬಾಲಮೇಳ — ಚಿಣ್ಣರ ಚಿಲಿಪಿಲಿ ತಾಣ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುಟ್ಟ ಮಕ್ಕಳ ಕಲೆ, ನೃತ್ಯ, ಹಾಡು, ಪದ್ಯ ಹಾಗೂ ಆಟಗಳ ಮೂಲಕ ಬಾಲಮೇಳ ಮನಮುಟ್ಟುವ ವಾತಾವರಣವನ್ನು ಸೃಷ್ಟಿಸಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಡೊಣ್ಣೂರ್, ಅಂಗನವಾಡಿ ಮೇಲ್ವಿಚಾರಕಿಯರಾದ ಶೀಲಾದೇವಿ, ಗೀತಾ ಯಡ್ರಾಮಿ, ಸುನಿತಾ, ಕವಿತಾ, ಅಜೀಂ ಪ್ರೇಮಜಿ ಫೌಂಡೇಶನ್‌ನ ಜ್ಯೋತಿಕಾ, ಅನನ್ಯ, ರೇಣುಕಾ, ದೇವಮ್ಮ, ಅನ್ನದಾನಿ, ಅಕ್ಕಮಹಾದೇವಿ, ರುಬಿನ, ನಾಗವೇಣಿ, ಕೊರವಾರ ವಲಯದ ಕಾರ್ಯಕರ್ತರು ಹಾಗೂ ಕಾಳಗಿ ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು.

ಪುಟ್ಟ ಮಕ್ಕಳ ಉತ್ಸಾಹ, ನಗು ಮತ್ತು ಪ್ರತಿಭೆಯಿಂದ ಕಾರ್ಯಕ್ರಮದ ಸೊಬಗು ಹೆಚ್ಚಿತು. ಬಾಲಮೇಳದ ಉದ್ದೇಶವಾದ ಮಕ್ಕಳ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಕೆಲಸ ಯಶಸ್ವಿಯಾಗಿ ನೆರವೇರಿತು. ಡೊಣ್ಣೂರ್ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪಾರ್ವತಿ ಕೆ. ಡೊಣ್ಣೂರ್ ನಿರೂಪಿಸಿದರು.

ವರದಿ: ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!