ಚಿಟಗುಪ್ಪ : ಚಿಟಗುಪ್ಪ ಕ್ರಿಕೆಟ್ ಲೀಗ್ ಸೀಜನ್ 5ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಪಟ್ಟಣದ ಹೊರವಲಯದ ಸಾಯಿ ಮೈದಾನದಲ್ಲಿ ಸಿಸಿಲ್ 5ನೇ ಆವೃತಿಗೆ ಅಮಿತ್ ಮಿಶ್ರ ರಿಬ್ಬನ್ ಕತ್ತರಿಸುವ ಉದ್ಘಾಟಿಸಿ ಚಾಲನೆ ನೀಡಿದರು.ಅಲ್ಲದೆ ಮೊದಲ ಪಂದ್ಯಕ್ಕೆ ಟಾಸ್ ಹಾರಿಸಿ ಕ್ರಿಕೆಟ್ ಆಟಗಾರರಿಗೆ ಶುಭ ಹಾರೈಸಿದರು.
ಬಳಿಕ ಸಿಸಿಲ್ ಅಧ್ಯಕ್ಷ ಶ್ರೀನಿವಾಸ ದುದಗುಂಡಿ ಪ್ರತಿ ವರ್ಷ ಪಟ್ಟಣದಲ್ಲದೆ ತಾಲ್ಲೂಕಿನ ಎಲ್ಲಾ ಎಲ್ಲಾ ಕ್ರಿಕೆಟ್ ಆಟಗಾರರಿಗೆ ಅವಕಾಶ ನೀಡಲಾಗುತ್ತಿತ್ತು.ಇದರಿಂದ ಪಟ್ಟಣದ ಆಟಗಾರರು ಅವಕಾಶದಿಂದ ವಂಚಿತರಾಗುತ್ತಿದ್ದರು.ಹೀಗಾಗಿ ಪಟ್ಟಣದ ಆಟಗಾರರಿಗೆ ಪ್ರತಿಭೆ ಹೊರಕಾಲು ಭರಪುರ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ನಂತರ ಮೊದಲ ಪಂದ್ಯ ಏರ್ಪಡಿಸಲಾಯಿತು.ಅಂಪೇರ್ ಆಗಿ ದತ್ತು ಹಲಗಿ ಹಾಗೂ ಶ್ರೀನಿವಾಸ ಕಾರ್ಯನಿರ್ವಾಹಿಸಿದರು.ಕಾಮೆಂಟ್ರಿಯನ್ನು ಜಾಂಟಿ,ಗೋಪಿ ಇಸ್ಮಾಯಿಲ್ ಲಾತೋಡಿ ಅವರು ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರೇವಣಪ್ಪ,ಪ್ರಮುಖರಾದ ಆಕಾಶ ಗುತ್ತೇದಾರ,ಎಲಿಯಾ,ವೀರೇಶ ತುಗಾವ ಸೇರಿ ಕ್ರಿಕೆಟ್ ಆಟಗಾಗರು,ಅಭಿಮಾನಿಗಳು,ವೀಕ್ಷಕರು ಉಪಸ್ಥಿತರಿದ್ದರು.
ಸಜೀಶ : ಲಂಬುನೋರ ಚಿಟಗುಪ್ಪ