ಕಾಳಗಿ : ಇಂದು ಕಾಳಗಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು, ಈ ಸಂದರ್ಭದಲ್ಲಿ ಕೆಪಿಆರ್ ಎಸ್ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ ರೈತರ ಬೆಳೆದ ತೊಗರಿ ಬೆಳೆಗಳು ಹೂವು ಕಾಯಿ ಬಿಡುವ ಸಮಯದಲ್ಲಿ ನೆಟೆ ರೋಗದಿಂದ ಒಣಗಿ ಹೋಗಿದ್ದ ತೊಗರಿ ಬೆಳೆ ಅಪಾರ ಹಾನಿಯುಂಟಾಗಿದೆ, ತೊಗರಿ ಪರಿಹಾರಕ್ಕಾಗಿ ಮತ್ತು ಬೆಳೆ ವಿಮೆ ಮಂಜೂರು ಮಾಡಲು, ಮತ್ತು ರಾಜ್ಯ ಸರ್ಕಾರ ಮುಖ್ಯ ಮಂತ್ರಿಗಳ ಅವರ್ಥ ನಿಧಿಯಿಂದ ಪ್ರತಿ ಕ್ವಿಂಟಲ್ ತೊಗರಿಗೆ ೫೦೦ ರೂಪಾಯಿ ಪ್ರೋತ್ಸಾಹ ಧನ ಕೊಡಲು ಮತ್ತು ಬೆಂಬಲ ಬೆಲೆ ಎಂ ಎಸ್ ಪಿ ಕಾನೂನು ಜಾರಿ ಮಾಡಲು ಒತ್ತಾಯಿಸಿ, ರಸ್ತೆ ತಡೆದು ಪ್ರತಿಭಟನೆ ಮೂಲಕ ತಹಸಿಲ್ದಾರ ಕಾಳಗಿ ಅವರಿಗೆ ಮನವಿ ಮಾತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ : ಪರಮೇಶ್ವರ ಕಾಂತಾ, ದಿಲೀಪ್ ನಾಗುರ್ kprs ಕಾರ್ಯದರ್ಶಿ ಕಾಳಗಿ, ರಾಮಚಂದ್ರ ಮುಕರಂಬಿ, ಸುನೀಲ್ ಗುತ್ತೇದಾರ, ದೇವೀಂದ್ರಪ್ಪ ಪಾಟೀಲ್ ಕೊರವಿ, kprs ನ ಮುಖಂಡರು ಮತ್ತು ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು,
ವರದಿ : ಹಣಮಂತ ಕುಡಹಳ್ಳಿ