ರೋಂ : ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್ (88) ವಿಧಿವಶರಾಗಿದ್ದಾರೆ. ವ್ಯಾಟಿಕನ್ ಸಿಟಿಯಲ್ಲಿ ಅವರು ನಿಧನರಾಗಿದ್ದಾರೆಂದು ಪ್ರಕಟಿಸಲಾಗಿದೆ.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕನ್ ನಾಯಕರಾಗಿದ್ದ ಪೋಪ್ ಬೆನೆಡಿಕ್ಟ್ ರಾಜೀನಾಮೆ ನೀಡಿದ ನಂತರ 2013ರಲ್ಲಿ ಫ್ರಾನ್ಸಿಸ್ ಅವರು ಪೋಪ್ ಆದರು.
ಪೋಪ್ ತಮ್ಮ 12 ವರ್ಷಗಳ ಪೋಪ್ ಸ್ಥಾನದಲ್ಲಿರುವಾಗಲೇ ಅವರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿದ್ದರು. ಅರ್ಜೆಂಟೀನಾದಲ್ಲಿ ಜನಿಸಿದ ಫ್ರಾನ್ಸಿಸ್, ಅಮೆರಿಕದಿಂದ ಬಂದ ಮೊದಲ ಪೋಪ್ ಆಗಿದ್ದವರು. ಈಸ್ಟರ್ ಪ್ರಾರ್ಥನೆ ಬಳಿಕ ಅವರು ಇವತ್ತು ಕೊನೆಯುಸಿರೆಳೆದರು.