ಹುನುಗುಂದ ಅಂಬೇಡ್ಕರ್ ಭವನದಲ್ಲಿ ನಡೆದ ಕ್ರಿಸ್ಮಸ್ ಹಬ್ಬದಲ್ಲಿ ಇಳಕಲ್ಲಿನ ಕುಲಕರ್ಣಿ ಪೇಟೆಯ ಯೂನಿಯನ್ ಸಂಸ್ಥೆಯ ವತಿಯಿಂದ ಎಲ್ಲಾ ಸಂಸ್ಥೆಯ ಪದಾಧಿಕಾರಿಗಳು ಕೂಡಿ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿದ್ದಂತ ಕ್ರೈಸ್ತ ಬಾಂಧವರಿಗೆ ಸಿಹಿ ,ಹೂ ಕೊಡುವುದರ ಮೂಲಕ , ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರಾಜು ಇಲಕಲ್ ಅವರು ಮಾತನಾಡಿ ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದು ಯಾವುದೇ ಜಾತಿ ಭೇದ ಭಾವವಿಲ್ಲದೆ ಇರೋಣ ಎಂಥ ಹೇಳುತ್ತಾ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ತಿಳಿಸಿದರು.

ಇದೇ ಸಂದರ್ಭದಲ್ಲಿ ದೀಪು ದೀಕ್ಷಾ ಸಂಸ್ಥೆಯ ಕಾರ್ಯದರ್ಶಿಯಾದ ಸವಿತಾ ಅಶೋಕ್ ಚಲವಾದಿ, ಯೂನಿಯನ್ ಸಂಸ್ಥೆಯ ಉಪಾಧ್ಯಕ್ಷರಾದ ಚನ್ನು ಗೋನಾಳ ಮಠ ಕಾರ್ಯದರ್ಶಿ ಪ್ರವೀಣ್ ಕೃಷ್ಣಾಪುರ್, ಸದಸ್ಯರಾದ ರಸುಲ್ ಬಂಗಾಲಿ, ಗುಂಡು,ಪ್ರವೀಣ್ ಇ , ಅನಿಲ್, ಸಂಗೀತ ಮಡಿವಾಳರ್, ಶ್ರುತಿ ಚಲವಾದಿ, ಹಾಗೂ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾದ ಪಾಸ್ಟರ್ ಸುನಿಲ್ ಕುಮಾರ್ ಪಿ ಇವರೆಲ್ಲರೂ ಉಪಸ್ಥಿತರಿದ್ದರು.




