ರಾಯಚೂರು : ನಗರದ ರೈಲ್ವೆ ನಿಲ್ದಾಣ ಬಳಿಯ ಮೆಥಡಿಸ್ಟ್ ಸೆಂಟ್ರಲ್ ಚರ್ಚಿನಲ್ಲಿ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಚರ್ಚಿನ ರೆವರೆಂಡ್ ಎ. ಸೀಮೆಯೋನ್ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಧರ್ಮ ಸಂದೇಶ ನೀಡಿದರು.
ರಾಯಚೂರು ನಗರ ಶಾಸಕ ಡಾಕ್ಟರ್ ಶಿವರಾಜ್ ಪಾಟೀಲ್ ಕೇಕ್ ಕತ್ತರಿಸಿ ಶುಭ ಕೋರಿದರು ಕ್ರೈಸ್ತರು ಕುಟುಂಬದ ಸದಸ್ಯರೊಂದಿಗೆ ಚರ್ಚೆಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್ ಕಟ್ಟಡ ಆವರಣ ಕೇಂದ್ರ ರೈಲು ನಿಲ್ದಾಣದಿಂದ ಚರ್ಚೆ ವರೆಗೆ ಅಲಂಕಾರಿತ ವಿದ್ಯುತ್ ದೀಪಗಳ ಮಾಲೆ ಹಾಕಲಾಗಿತ್ತು. ಸರ್ವ ಧರ್ಮದ ಮುಖಂಡರು ರಾಜಕೀಯ ಪಕ್ಷದ ನಾಯಕರುಗಳು ಚರ್ಚಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೆ ಹಬ್ಬದ ಶುಭ ಕೋರಿದರು. ಬಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದರಿಂದ ಚರ್ಚಿನ ಒಳಗಡೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು ನಗರದ ಸ್ಟೇಷನ್ ರಸ್ತೆ ಆಶಾಪೂರ್ ರಸ್ತೆ ಎಂ ಟಿ ಲೆಔಟ್. ಎಲ್ ಬಿ ಎಸ್. ಸೇರಿ ಹಲವಡೆ ಚರ್ಚೆಗಳಲ್ಲಿ ಕ್ರಿಸ್ಮಸ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರದ ಶಾಸಕ ಡಾಕ್ಟರ್ ಶಿವರಾಜ ಪಾಟೀಲ್ ಸನ್ನಿ ಮಹಾರಾಜ್. ಬಿನ್ನಿ ಮಹಾರಾಜ್. ರವಿಂದ್ರ ಜೇಲ್ದಾರ್. ಚರ್ಚ್ ನ ಫಾಸ್ಟರ್ ಕ್ರಿಶ್ಚಿಯನ್ ಸಮುದಾಯದ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ