——ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡಕ್ಕೆ ಮುಂಬೈ ಇಂಡಿಯನ್ಸ್ ಎದುರಾಳೀ
ಮುಂಬೈ: ಐಪಿಎಲ್ ಪುರುಷರ ಕ್ರಿಕೆಟ್ ಪಂದ್ಯಾವಳಿ ಮಾದರಿಯ ಮಹಿಳಾ ಫ್ರಿಯಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಇಂದು ಅದ್ಧೂರಿ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ಸಾಯಂಕಾಲ ೭ ಗಂಟೆಗೆ ಪಂದ್ಯ ಆರಂಭವಾಗಲಿದ್ದು, ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವನ್ನು ಭಾರತ ತಂಡದ ಪ್ರಮುಖ ಆಟಗರ‍್ತಿ ಸ್ಮೃತಿ ಮಂದಾನಾ ಮುನ್ನಡೆಸುವರು.
ಸ್ಮೃತಿ ಮಂದಾನಾ ರಾಯಲ್ ವಾಲೆಂರ‍್ಸ್ ಬೆಂಗಳೂರು ತಂಡದ ಪ್ರಮುಖ ಆರ‍್ಷಣೆ ಕೂಡ ಆಗಿದ್ದು, ವಿಕೇಟ್ ಕೀಪರ್ ರಿಚಾ ಘೋಷ್ ಹಾಗೂ ಅರುಂದತಿ ರೆಡ್ಡಿ ತಂಡದ ಪ್ರಮುಖ ಆಟಗರ‍್ತಿಯರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಭಾರತ ತಂಡದ ನಾಯಕಿ ರ‍್ಮನ್ರೀತ್ ಕೌರ್ ಮುನ್ನಡೆಸುವರು.




