Ad imageAd image

ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ

Bharath Vaibhav
ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ
WhatsApp Group Join Now
Telegram Group Join Now

ಚಿಕ್ಕೋಡಿ : –ಸದಲಗಾ ಶಾಖೆ ಹಾಗೂ ಸದಲಗಾ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸದಲಗಾ ಪುರಸಭೆಯ ಆಡಳಿತಾಧಿಕಾರಿಗಳು ಆದ ಚಿಕ್ಕೋಡಿಯ ಉಪ ವಿಭಾಗಿಕಾರಿಗಳು ಶ್ರೀ ಸುಭಾಷ್ ಸಂಪಗಾವಿ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀ ಶಿವಾನಂದ ಬೋಸಲೆ ಅವರು ವಹಿಸಿದ್ದರು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಶಾಕಾಧ್ಯಕ್ಷರು ಶ್ರೀ ಸಂಜೀವ್ ಗುಡೆ ಮಾತನಾಡಿ ಪೌರಕಾರ್ಮಿಕ ದಿನಾಚರಣೆಯ ಉದ್ದೇಶವನ್ನು ತಿಳಿಸುತ್ತಾ ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕಂತ ಹೇಳಿದರು ಮುಖ್ಯ ಅತಿಥಿಗಳಾದ ಉಪವಿಭಾಗಾಧಿಕಾರಿಗಳು ಮಾತನಾಡಿ ಪೌರಕಾರ್ಮಿಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಮಸ್ಯೆಗಳು ಏನಾದರೂ ಇದ್ದರೆ ಅದನ್ನು ಸರ್ಕಾರದ ಮಟ್ಟದಲ್ಲಿ ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಅಂತ ತಿಳಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಅಭಿಜಿತ್ ಪಾಟೀಲ್ ಮಾತನಾಡಿ ಪೌರಕಾರ್ಮಿಕರ ಕೆಲಸದ ಒತ್ತಾಯ ಕಡಿಮೆ ಮಾಡಲು ಯಂತ್ರೋಪಕರಣಗಳನ್ನು ಉಪಯೋಗಿಸಲು ಸೂಚಿಸಿದರು ಪುರಸಭೆಯ ಮಾಜಿ ಉಪಾಧ್ಯಕ್ಷರು ಮಾತನಾಡಿ ಪೌರಕಾರ್ಮಿಕರಿಗೆ ಕ್ವಾಟರ್ಸ್ ನಿರ್ಮಾಣ ಮಾಡಲು ಸೂಚಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಅಧಿಕಾರಿಗಳು ಎಲ್ಲ ಪೌರಕಾರ್ಮಿಕರು ಸುರಕ್ಷಾ ಸಾಮಗ್ರಿಗಳನ್ನು ಉಪಯೋಗಿಸಿ ಆರೋಗ್ಯದ ಕಡೆ ಗಮನ ಕೊಡಬೇಕೆಂದು ತಿಳಿಸಿದರು ಇದೇ ಸಮಯದಲ್ಲಿ ಪೌರಕಾರ್ಮಿಕ ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಭೀಮರಾವ್ ಮಾಳಗೆ ಅತಾವುಲ್ಲ ಮುಜಾವರ್ ಹೇಮಂತ್ ಸಿಂಗೆ ಪ್ರಶಾಂತ್ ಕರಂಗಳೆ ರವಿ ಗೋಸಾವಿ ಗಣ್ಯರಾದ ಅಭಿನಂದನ್ ಪಾಟೀಲ್ ಸಂತೋಷ್ ನವಲೆ ದರೆಪ್ಪ ಹವಾಲ್ದಾರ್ ಪ್ರಕಾಶ್ ಅನುರೆ ಚಿದಾನಂದ ಸಮಗಾರ್ ಇಲ್ಲಾಯಿ ಸನದಿ ಸುನಿಲ್ ನಂದೆ ಕೈಲಾಸ್ ಮಾಳಗೆ ರಾಜು ಅಮೃತಸಮ್ಮಣ್ಣವರ ಉಪಸ್ಥಿತರಿದ್ದರು.

ಐ ಬಿ ಶೇಷಮ ಸ್ವಾಗತಿಸಿದರು ಎಂ ಬಿ ಗೌಂಡಿ ವಂದಿಸಿದರು ವಿಜಯಕುಮಾರ್ ಕೋಕನೆ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!