ಬೆಳಗಾವಿ: ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಯೊಂದರ ನೀರು ನಿಲ್ಲುವ ಬದುವಿನಲ್ಲಿ ಅಕ್ರಮವಾಗಿ ಕೆರೆಯ ಮಣ್ಣನ್ನು ಹಾಗೂ ಗೊರಸನ್ನು ಸಾಗಿಸುತ್ತಿದ್ದು, ಇದರಿಂದ ಕೆರೆಯ ಸುತ್ತಿಲಿನ ಸಂಪತ್ತು ನಾಶವಾಗುತ್ತಿದೆ.
ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುತ್ತಲಿನ ನಾಗರಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಪತ್ರಕರ್ತರು ಪ್ರಶ್ನೆ ಮಾಡಿದಾಗ ಅಕ್ರಮ ಸಾಗಾಣಿಕೆ ಮಾಡುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರೆಯ ಸುತ್ತಲಿನ ನಿಸರ್ಗ ಸಂಪತ್ತು ರಕ್ಷಿಸಲು ಶೀಘ್ರ ಕ್ರಮ ವಹಿಸಲು ನಾಗರಿಕರು ಆಗ್ರಹಿಸಿದ್ದಾರೆ.




