ಗೋವಾ ಟೀಮ್ ಎಂದವರಿಗೆ ಗೋ ಬ್ಯಾಕ್ ಎಂದ ಕಾರ್ಮಿಕರು
ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ಚುನಾವಣೆ
ಬುದ್ಧಿವಂತ ಚಿನ್ನದ ಗಣಿ ಕಾರ್ಮಿಕ ಚಿನ್ನದ ಗಣಿ ಕಾರ್ಮಿಕರ ಆಶೀರ್ವಾದದಿಂದ ಇಂದು ಸಿಐಟಿಯು ಬಂಡಿಗಾಲಿ ಪಕ್ಷ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಭೇರಿ ಬಾರಿಸಿದೆ ಅಧ್ಯಕ್ಷರಾಗಿ ಕೆ ಮಹಾಂತೇಶ ಗೆಲುವು ಸಾಧಿಸಿದರೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್ ಎಂ ಶಫೀ ಗೆಲುವು ಸಾಧಿಸಿದ್ದಾರೆ.
ಚಂದ್ರಶೇಖರ್ ಆನ್ವರಿ ( ಶಾಂತಪ್ಪ ಆನ್ವರಿ ),ಯಂಕೋಬ ಮಿಯ್ಯಪುರ, ಜಮದಗ್ನಿ ಕೋಠಾ, ಗೌಸ್ ಮಿಯಾ, ನಾಗರಾಜ್ ಡಿ, ರಮೇಶ್ ಬಾಬು, ಮಹಮ್ಮದ್ ಹನೀಫ್, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ , ಹನುಮಂತಗೌಡ ಗುರಿಕಾರ್, ಗುಂಡಪ್ಪಗೌಡ ಗುರಿಕಾರ್, ಜಯಭೇರಿ
ಎಐಟಿಯುಸಿ ತಕ್ಕಡಿ ಪಕ್ಷದ ಆರು ಜನ ಅಭ್ಯರ್ಥಿಗಳಿಗೆ ಚಿನ್ನದ ಗಣಿ ಕಾರ್ಮಿಕರು ಆಶೀರ್ವಾದ ಮಾಡಿದ್ದಾರೆ ತಿಪ್ಪಣ್ಣ, ಗಂಗಪ್ಪ, ಎಂ ಡಿ ಮುನಿರುದ್ದೀನ್, ಉಮಾಪತಿ, ಹನುಮಂತರಾಯ, ಮಹಿಳೆ ಅಭ್ಯರ್ಥಿಯಾಗಿ ಪೆಂಚಲಮ್ಮ ಗೆಲುವು ಸಾಧಿಸಿದ್ದಾರೆ.
ಆಕಳು ಪಕ್ಷದಿಂದ ಸ್ಪರ್ಧೆ ಮಾಡಿದ ಆರು ಜನ ಅಭ್ಯರ್ಥಿಗಳು ಗುರುರಾಜ್, ಮೌನೇಶ್ ನಾಯಕ್, ಹಾಜಿ ಬಾಬು, ಅಮರೇಶ್, ಡಾ. ಕುಪ್ಪಣ್ಣ, ಗ್ಯಾನಪ್ಪ, ಗೆಲುವು ಸಾಧಿಸಿದ್ದಾರೆ.
ಈ ಬಾರಿ ಚಿನ್ನದ ಗಣಿ ಕಾರ್ಮಿಕರು ಬುದ್ದಿವಂತಿಕೆಯ ಮತದಾನ..!
ಎಐಟಿಯುಸಿ ಸಂಘದಿಂದ ಹೊರ ಬಂದ 15 ಜನ ಮುಖಂಡರು ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಆಟದಿಂದ ಎಸ್ ಎಂ ಶಫೀ ನೇತೃತ್ವದಲ್ಲಿ ಸಿಐಟಿಯು ಸಂಘಟನೆಯನ್ನು ಸೇರ್ಪಡೆಗೊಂಡು ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಚುನಾವಣೆಗೆ ಬಂಡಿಗಾಲಿ ಗುರುತಿಗೆ ಸ್ಪರ್ಧೆಗೆ ಮುಂದಾದ ಮುಖಂಡರಿಗೆ
ಪ್ರಚಾರ ಸಂದರ್ಭದಲ್ಲಿ ಎಐಟಿಯುಸಿ ಸಂಘದ ಮುಖಂಡರು ಗೋವಾ ಟೀಮ್ ಎಂದು ಟೀಕೆ ಮಾಡಿದ್ದರು ಅದಕ್ಕೆ ಪ್ರತ್ಯುತ್ತರವಾಗಿ ಈ ಚುನಾವಣೆಯನ್ನು ಗೆದ್ದು ಗೋವಾ ಟೀಮ್ ಎಂದವರಿಗೆ ಗೋ ಬ್ಯಾಕ್ ಎಂದಿದ್ದಾರೆ ಎಐಟಿಯುಸಿ ತಕ್ಕಡಿ ಗುರುತಿನ ಪಕ್ಷದಲ್ಲಿ ಘಟಾನುಗಟಿ ಮುಖಂಡರು ಸೋಲನ್ನುವಿಸಿದ್ದು
ನೋಡಿದರೆ ಒಬ್ಬ ಸ್ಥಳೀಯ ಹಿರಿಯ ಮುಖಂಡನಾದ ಎಸ್ ಎಂ ಶಫಿ ಇವರನ್ನು ದೂರ ಮಾಡಿರುವುದರಿಂದ ಕಳೆದ ಬಾರಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಎಐಟಿಯುಸಿ ತಕ್ಕಡಿ ಪಕ್ಷ ಈ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸೋಲುವಂತಾಗಿದೆ. ಈ ಬಾರಿ ಆಕಳು ಪಕ್ಷ ಹಲವಾರು ಭರವಸೆಗಳೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಚಿನ್ನದ ಗಣಿ ಕಾರ್ಮಿಕರು ಕೇವಲ ಆರು ಜನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ ಪಕ್ಷದ ಪ್ರಮುಖ ನಾಯಕರದ ವಾಲೇ ಬಾಬ್ ಕೆಲವೇ ಕೆಲವು ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಟಿ ಯು ಸಿ ಐ ಮತ್ತು ಬಿಎಂಎಸ್ ಪಕ್ಷಗಳ ಅಭ್ಯರ್ಥಿಗಳು ಯಾರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಮುಂಬರುವ 2026 ಹೊಸ ವೇತನ ಒಪ್ಪಂದದ ಆಶಾಕಿರಣದಲ್ಲಿ ಹಾಗೂ ಕಾರ್ಮಿಕರ ಬಹುನಿರೀಕ್ಷಿತ ಮೆಡಿಕಲ್ ಆನ್ ಫಿಟ್ ಈಗಾಗಲೇ ಬಹುದೊಡ್ಡ ಕಾರ್ಮಿಕರ ಆಶೀರ್ವಾದ ಪಡೆದು ಜಯಭೇರಿ ಬಾರಿಸಿದ ಸಿಐಟಿಯು ಬಂಡಿಗಾಲಿ ಪಕ್ಷದ ಮುಖಂಡರು ಕಾರ್ಮಿಕರಿಗೆ ನೀಡಿದ ಆಶ್ವಾಸನೆಗಳನ್ನು ಯಾವ ರೀತಿ ಈಡೇರಿಸುತ್ತಾರೆ ಅನ್ನುವುದನ್ನು ಕಾಯ್ದು ನೋಡೋಣ.
ವರದಿ : ಶ್ರೀನಿವಾಸ ಮಧುಶ್ರೀ




