Ad imageAd image
- Advertisement -  - Advertisement -  - Advertisement - 

ನಗರವಾಸಿಗಳ ಮನರಂಜಿಸಿದ ಹಳ್ಳಿ ಸೊಗಡಿನ ರತಿ ಕಲ್ಯಾಣ ಬಯಲಾಟ

Bharath Vaibhav
ನಗರವಾಸಿಗಳ ಮನರಂಜಿಸಿದ ಹಳ್ಳಿ ಸೊಗಡಿನ ರತಿ ಕಲ್ಯಾಣ ಬಯಲಾಟ
WhatsApp Group Join Now
Telegram Group Join Now

ಸಿರುಗುಪ್ಪ :- ನಗರದ ಶ್ರೀ ಯಲ್ಲಮ್ಮ ದೇವಿ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಆವರಣದಲ್ಲಿ ಶ್ರೀ ಬಸವ ಜಯಂತಿ ಅಂಗವಾಗಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶನಿವಾರ ರಾತ್ರಿ ನಡೆದ ರತಿ ಕಲ್ಯಾಣ ಅರ್ಥಾತ್ ಕೌಡ್ಲಿಕನ ವಧೆ ಎಂಬ ಸಾಮಾಜಿಕ ಬಯಲು ನಾಟಕವು ನಗರವಾಸಿಗಳ ಮನರಂಜಿಸಿತು.

 

ನಾಟಕದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಎಮ್.ಸತೀಶ್ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಿಂದಾಗಿ ಮರೆಯಾಗುತ್ತಿರುವ ಇಂತಹ ಹಳ್ಳಿ ಸೊಗಡಿನ ಸಾಂಸ್ಕೃತಿಕ ಬಯಲಾಟದ ಕಲೆಯನ್ನು ನಗರದಲ್ಲಿ ಪ್ರದರ್ಶಿಸುತ್ತಿರುವ ನಾಟಕ ಮಂಡಳಿಯ ಕಾರ್ಯ ಅಭಿನಂದನಾರ್ಹವಾದದ್ದು.

 

ನೆರೆಯ ಸೀಮಾಂದ್ರ ಹಾಗೂ ನಮ್ಮ ಕರ್ನಾಟಕದ ಗಡಿಭಾಗದಲ್ಲಿನ ಕಲಾವಿದರನ್ನು ಸೇರಿಸಿ ಮಹಾಭಾರತದ ಸಂದೇಶವನ್ನು ಸಾರುವ ಈ ನಾಟಕವು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ಜರುಗಲೆಂದರು.

ತಾಲೂಕಿನ ಬೂದುಗುಪ್ಪ ವಿಶ್ವನಾಥ ಸಾಹುಕಾರ್ ಅವರು ನಿರ್ಮಿಸಿದ ರಂಗಸಜ್ಜಿಕೆಯಲ್ಲಿ ಅರಳಿಗನೂರು, ರಾರಾವಿ, ಮುದೇನೂರು, ಕೆ.ಸೂಗೂರು, ನಾಗಲಾಪುರ, ನೆರೆಯ ಆದೋನಿ ತಾಲೂಕಿನ ಗ್ರಾಮಗಳ ಪಾತ್ರಧಾರಿಗಳು ಅಭಿನಯಿಸಿದ್ದು, ಸುತ್ತಮುತ್ತಲಿನ ಗ್ರಾಮದಿಂದಲೂ ಕಲಾಭಿಮಾನಿಗಳು, ಬಂದುಗಳು, ವಿವಿಧ ವಾರ್ಡ್ಗಳ ಸಾವಿರಾರು ಜನರು ನೆರೆದಿದ್ದರು.

ಹಾರ್ಮೋನಿಯಂ ಮಾಸ್ಟರ್‌ಗಳಾದ ಕರಿಬಸವನಗೌಡ, ಸುಬ್ಬಯ್ಯ, ಪಂಪಯ್ಯಸ್ವಾಮಿ ತಬಲವಾದಕ ಯರಿಸ್ವಾಮಿ, ಪ್ಯಾಡ್ ವಿಜಯ್‌ಕುಮಾರ್ ಅವರ ಸಂಗೀತದಲ್ಲಿ ಮಹಾಭಾರತದಲ್ಲಿನ ಪಾತ್ರಗಳಾದ ಬಾಲಕೃಷ್ಣ, ಧರ್ಮರಾಯ, ಭೀಮಸೇನ, ಅರ್ಜುನ, ಕಮಲರಾಜ, ನಾರದ, ಮನ್ಮಥ, ಕೌಡ್ಲಿಕನ ಪಾತ್ರಧಾರಿಗಳು.
ಹಾಗೂ ಕೂಡ್ಲಿಗಿ ತಾಲೂಕಿನ ಮಹಿಳಾ ಕಲಾವಿಧೆಯರಾದ ಕಮಲಗಾಂದಿ ರುಕ್ಮಿಣ ಪಾತ್ರದಲ್ಲಿ ಜ್ಯೋತಿ, ರತಿ ಪಾತ್ರದಲ್ಲಿ ಬ್ಲಾಕ್ ಸುಮಾ, ದ್ರೌಪದಿ ಪಾತ್ರದಲ್ಲಿ ಲಕ್ಷ್ಮಿ, ಸಾರಥಿಯಾಗಿ ಶಿವು ಅಭಿನಯಿಸಿದರು.

ಇದೇ ವೇಳೆ ಶಾಲೆಯ ಅಧ್ಯಕ್ಷರಾದ ವೈ.ಡಿ.ವೆಂಕಟೇಶ, ನಾಟಕ ಮಂಡಳಿಯ ವ್ಯವಸ್ಥಾಪಕರಾದ ಜಿ.ಹುಲುಗಪ್ಪ, ಆರ್.ಯೋಗಾನಂದ, ಪರಶುರಾಮ, ಹೆಚ್.ಬಿ.ಅಮರೇಶ ಹಾಗೂ ಹಿನ್ನಲೆಗಾಯಕರು ಇದ್ದರು.

ವರದಿ ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!