ಬೆಳಗಾವಿ : ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಎಂಎಲ್ಸಿ ಸಿಟಿ ರವಿ ಅವರು ವಿಧಾನ ಪರಿಷತ್ನಲ್ಲಿ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ ಪ್ರಕರಣ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಘಟನೆ ಆಗಿ ಹೋಗಿದ್ದು, ಸಿ. ಟಿ ರವಿ ಕ್ಷಮೆ ಕೇಳಿದ ಮೇಲೂ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಬಿಜೆಪಿ ಸೇರಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಗೂ ಪರೋಕ್ಷವಾಗಿ ಹೇಳಿದ್ದಾರೆ.
ಆ ಘಟನೆ ಮುಗಿದೇ ಹೋಗಿದೆಯಲ್ವಾ.. ಮತ್ಯಾಕೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುವಂತೆ ಮುಂದುವರಿಯುವುದು. ಯಾರೂ ಸಹ ಮುಂದುವರಿಸುವಂತೆ ವರ್ತನೆ ಮಾಡಬಾರದು ಎಂದೂ ಸಲಹೆ ನೀಡಿದ್ದಾರೆ.
ಸಿಟಿ ರವಿ-ಲಕ್ಷ್ಮಿ ಹೆಬ್ಬಾಳ್ಕರ್ ಘಟನೆ ಒಂದೇ ಅಲ್ಲ.. ಸಂಸತ್ತು, ವಿಧಾನಸಭೆಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ, ಇದೇನು ಹೊಸದಲ್ಲ. ಇಲ್ಲಿಗೆ ವಿಚಾರ ಬಿಟ್ಟುಬಿಡುವುದು ಒಳ್ಳೆಯದ್ದು ಎಂದಿದ್ದಾರೆ.