Ad imageAd image

ಅಧಿವೇಶನದಲ್ಲಿ ಹೆಬ್ಬಾಳ್ಕರ್ ವಿರುದ್ಧ ಅವ್ಯಾಚ್ಯ ಪದ ಬಳಕೆ : ಅದೊಂದು ಕೆಟ್ಟ ಘಳಿಗೆ ಎಂದ ಸಿಟಿ ರವಿ 

Bharath Vaibhav
ಅಧಿವೇಶನದಲ್ಲಿ ಹೆಬ್ಬಾಳ್ಕರ್ ವಿರುದ್ಧ ಅವ್ಯಾಚ್ಯ ಪದ ಬಳಕೆ : ಅದೊಂದು ಕೆಟ್ಟ ಘಳಿಗೆ ಎಂದ ಸಿಟಿ ರವಿ 
WhatsApp Group Join Now
Telegram Group Join Now

ಬೆಳಗಾವಿ : ಚಳಿಗಾಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವ್ಯಾಚ್ಯ ಪದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಅದೊಂದು ಕೆಟ್ಟ ಘಳಿಗೆ ಎಂದು ಹೇಳಿದರು.

ಚಳಿಗಾಲದ ಅಧಿವೇಶನದ ನಂತರ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ ಸಿಟಿ ರವಿ ತಮ್ಮ ಪತ್ನಿಯೊಂದಿಗೆ ದಕ್ಷಿಣ ಕಾಶಿ ಕಪಿಲೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ಬಗ್ಗೆ ಮಾತನಾಡಿದ ಸಿಟಿ ರವಿ, ಡಿಸೆಂಬರ್ ನಲ್ಲಿ ನಡೆದ ಘಟನೆಯ ಹಿನ್ನೆಲೆ ಕಾರ್ಯಕರ್ತರು ಹರಕೆಯನ್ನು ಹೊತ್ತಿದ್ರು. ದಕ್ಷಿಣ ಕಪಿಲೇಶ್ವರ ದೇವಾಲಯದಲ್ಲಿ ಜಲಾಭಿಷೇಕ ಮಾಡಿದ್ದೇನೆ. ನನ್ನೊಳಿಗಿನ ಕೆಟ್ಟ ಗುಣಗಳು ದೂರವಾಗಲಿ. ನಮ್ಮಿಂದ ಯಾರಿಗೂ ಕೆಟ್ಟದ್ದು ಆಗೋದು ಬೇಡ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

ಅಲ್ಲದೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಪದದಲ್ಲಿ ನಿಂದಿಸಿರುವುದು ಅದೊಂದು ಕೆಟ್ಟ ಘಳಿಗೆ ಅದರ ವಿಷಯವಾಗಿ ಮಾತಾಡಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ ಎಂದು ಸಿಟಿ ರವಿ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!