ಧಾರವಾಡ : ಸವಾರರ ಪ್ರಾಣಕ್ಕೆ ಕಂಟಕವಾಗಿದ್ದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳ ನಡೆಗೆ ಬೇಸತ್ತ ಯುವಕನೋರ್ವ, ತಾನೇ ರಸ್ತೆಗಿಳಿದು ಗುಂಡಿ ಮುಚ್ಚುವ ಮೂಲಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾನೆ.
ಧಾರವಾಡದ ಮಣಕಿಲ್ಲಾ ನಿವಾಸಿ ಹಾಗೂ ಸಮಾಜ ಸೇವಕ ಮೊಜಿನ್ ಘೀ ವಾಲೆ, ಧಾರವಾಡ ನಗರದ ಸವದತ್ತಿ ಪಿ.ಬಿ. ರಸ್ತೆಯಲ್ಲಿ ಬಿದ್ದಿದ್ದ ಅಪಾಯಕಾರಿ ಗುಂಡಿಗಳನ್ನು ಸ್ವತಃ ಮಣ್ಣು ಹಾಕಿ ಮುಚ್ಚಿದ್ದಾರೆ. ವಾಹನಗಳಿಗೆ ಅಡ್ಡ ವಾಗಿರುವ ಈ ಗುಂಡಿಗಳನ್ನು ಗಮನಿಸಿದ ಮೊಜಿನ್, ಸಾರ್ವಜನಿಕರ ಸುರಕ್ಷತೆಗಾಗಿ ತಾವೇ ಚೀಲದಲ್ಲಿ ಮಣ್ಣು ತಂದು ಗುಂಡಿಗಳನ್ನು ಬುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೋಟಿ ಕೋಟಿ ಅನುದಾನದ ನಡುವೆಯೂ ರಸ್ತೆ ಸರಿಪಡಿಸದ ಪಾಲಿಕೆಯ ಕಾಳಜಿಯನ್ನು ಈ ಯುವಕನ ಕಾರ್ಯ ಪ್ರಶಂಸುವಂತಿದೆ. ಯುವಕನ ಈ ಜನಪರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವರದಿ : ವಿನಾಯಕ ಗುಡ್ಡದಕೇರಿ




