ಸಿರುಗುಪ್ಪ : -ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಪೌರಾಡಳಿತ ನಿರ್ದೇಶನಾಲಯ, ನಗರಸಭೆ ಕಾರ್ಯಾಲಯ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘಗಳ ಸಹಯೋಗದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನಾಚರಣೆಯನ್ನು ನಗರಸಭೆ ಅಧ್ಯಕ್ಷೆ ರೇಣುಕಮ್ಮ ಉದ್ಘಾಟಿಸಿದರು.
ನಗರಸಭೆ ಆಯುಕ್ತ ಹೆಚ್.ಎನ್.ಗುರುಪ್ರಸಾದ್ ಅವರು ಮಾತನಾಡಿ ನಗರದ ಸ್ವಚ್ಛತೆಯ ಕಾರ್ಯದೊಂದಿಗೆ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಪೌರ ಕಾರ್ಮಿಕರಾದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.
ಆದಕಾರಣ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವಾಗ ನಿಮ್ಮ ಮೂಗು, ಬಾಯಿ, ಕೈ ಮತ್ತು ಕಾಲುಗಳಿಗೆ ಸುರಕ್ಷಾ ಕವಚಗಳನ್ನು ಧರಿಸಬೇಕೆಂದು ತಿಳಿಸಿದರು.
ಪೌರ ನೌಕರರ ಸಂಘದ ಗೌರವಾಧ್ಯಕ್ಷ ಅಮರೇಶ ಅವರು ಮಾತನಾಡಿ ನಗರದ ಅಂದವನ್ನು ಹೆಚ್ಚಿಸುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ತಿಳಿಸುವುದರೊಂದಿಗೆ ಪೌರಕಾರ್ಮಿಕ ದಿನಾಚರಣೆ ಹಿನ್ನಲೆಯನ್ನು ತಿಳಿಸಿದರು.
ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದವರೆಗೆ ಸಾಗಿದ ಮೆರವಣಿಗೆಯಲ್ಲಿ ವಾದ್ಯಗಳಿಗೆ ಪೌರ ನೌಕರರು, ಕಾರ್ಮಿಕರು, ಸಂಘದ ಪದಾಧಿಕಾರಿಗಳು ನರ್ತಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ನಗರಸಭೆ ಉಪಾಧ್ಯಕ್ಷೆ ಕೆ.ಯಶೋದಮೂರ್ತಿ, ಸದಸ್ಯರು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕೋಬ, ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ