
ರಾಮದುರ್ಗ: ತಾಲೂಕಿನ ಮನಿಹಾಳ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ ಮಿಷನ್ -ಸ್ವಚ್ಛತೆಯೇ ಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನಮವ್ವ ಪಿಡ್ಡನ್ನವರ, ಸದಸ್ಯರಾದ ನುರಂದಪ್ಪ ಕೊಂಗಿ,ವೀರಬಸಪ್ಪ ದೊಡಮನಿ, ಪ್ರವೀಣ ಗೊಣಬಾಳ, ಬುಡ್ನೇಸಾಬ ನವದಿ, ಮಾರುತಿ ಪ್ಯಾಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ರಾಠೋಡ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಾದ ಜ್ಯೋತಿ ಯಲಗೋಡ, ಪವಿತ್ರಾ ಬಡಿಗೇರ, ವಿಜಯಲಕ್ಷ್ಮೀ ಶಿರಿ, ರೇಖಾ ಆವೋಜಿ, ಇನ್ನಿತರರು ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ: ಕುಮಾರ ಎಂ




