ಗೋಕಾಕ : ಮೊಲಾಸಿಸ್ ತುಂಬಿಕೊಂಡು ಸಾಗಿಸುತಿದ್ದ ಟ್ಯಾಂಕರ್ ಪಲ್ಟಿಯಾಗಿ ಲಾರಿ ಕೆಳಗೆ ಸಿಕ್ಕು ಕ್ಲಿನರ್ ಸಾವಿಗಿಡಾದ ಘಟನೆ ಗೋಕಾಕದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹುದಲಿಯಿಂದ ಹುಣಶ್ಯಾಳ ಶುಗರ ಕಾರ್ಖಾನೆಗೆ ಸಾಗಿಸುತಿದ್ದ ಮೊಲಾಸಿಸ್ ಟ್ಯಾಂಕರ್ ಗೋಕಾಕ ಹೊರವಲಯದ ಮಾಲದಿನ್ನಿ ಕ್ರಾಸ್ ಹತ್ತಿರ ಚಾಲಕನ ಅರಾಜುಕತೆಯಿಂದ ಗುಂಡಿಯಲ್ಲಿ ಮಂಗಳವಾರ ಟ್ಯಾಂಕರ್ ಬಿದ್ದಿತ್ತು.
ಗ್ರಾಮೀಣ ಪೋಲಿಸರು ಟ್ಯಾಂಕರನಲ್ಲಿದ್ದ ಮೊಲ್ಯಾಸಿಸ್ ಖಾಲಿ ಮಾಡಿಸಿದ ನಂತರ ಟ್ಯಾಂಕರನ ಬಾಗಿಲಲ್ಲಿ ಕ್ಲೀನರ್ ಸುರೇಶ ಮಾನೆ ಶವ ಪತ್ತೆಯಾಗಿದ್ದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಸಾವಿಗಿಡಾದ ವ್ಯಕ್ತಿ ರಾಯಬಾಗ ತಾಲೂಕಿನ ನಂದಿಕುರುಳಿ ಗ್ರಾಮದ ಸುರೇಶ ಮಾನೆ ಎಂದು ತಿಳಿದು ಬಂದಿದ್ದು ಟ್ಯಾಂಕರ ಪಲ್ಟಿಯಾದ ತಕ್ಷಣ ಬಾಗಿಲು ತೆಗೆಯಲಾಗದೆ ಉಸಿರು ಗಟ್ಟಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಘಟನೆಯಾದ ಸ್ಥಳದಲ್ಲಿ ಗ್ರಾಮೀಣ ಪಿಎಸ್ಐ ಕೆ.ವಾಲಿಕಾರ ಠಿಕಾನಿ ಹೂಡಿ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ಮದ್ಯಾನ್ಹ ಟ್ಯಾಂಕ ಪಲ್ಟಿಯಾದರೂ ಮೇಲೆತ್ತಲು ಟ್ಯಾಂಕರ ಮಾಲಿಕ ನಿರ್ಲಕ್ಷ ಮಾಡಿದ್ದರಿಂದ ಈ ಸಾವು ಎಂದು ಮಾಲಿಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಮನೋಹರ ಮೇಗೇರಿ




