ಸಿಂಧನೂರು : ಕರ್ನಾಟಕ ಭೂ ಕಬಳಿಕೆ ಕಾಯ್ದೆ ನಿಷೇಧ ವಿಶೇಷ ನ್ಯಾಯಾಲಯವು ಪಾದಚಾರಿ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಕೊಂಡಿರುವುದನ್ನು ತೆರವು ಗೊಳಿಸುವಂತೆ ಡಿಸೆಂಬರ್ 26 ಕೊನೆ ದಿನ ಎಂದು ಆದೇಶ ನೀಡಿದ ಹಿನ್ನಲೆಯಲ್ಲಿ ನಗರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಮೂರು ತಂಡಗಳ ರಚನೆ ಮಾಡಿ ನಗರದ ಗಂಗಾವತಿ. ರಾಯಚೂರು. ಕುಷ್ಟಗಿ. ಮಸ್ಕಿ. ಹಳೆ ಬಜಾರ್ ಹಾಗೂ ಸುಖಲಪೇಟೆ ಮುಖ್ಯ ರಸ್ತೆ ಗಳಲ್ಲಿ ಇಟ್ಟುಕೊಂಡಿದ್ದ ಡಬ್ಬಾ- ಶೆಡ್ಡು ಅಂಗಡಿಗಳನ್ನು ತೆರವು ಕಾರ್ಯಾಚರಣೆ ಬುಧವಾರ ಮತ್ತು ಗುರುವಾರ ಹಗಲು-ರಾತ್ರಿ ಕಾರ್ಯಚರಣೆಯಲ್ಲಿ ಲಿಂಗಸಗೂರು ಸಹಾಯಕ ಆಯುಕ್ತ, ನಗರದ ತಹಸಿಲ್ದಾರ್ . ನಗರಸಭೆ ಪೌರಾಯುಕ್ತ, ತಾಲೂಕ ಪಂಚಾಯತ ಇ ಓ, ಡಿವೈಎಸ್ಪಿ ಬಿ. ಎನ್. ತಳವಾರ್, ಸಿಪಿಐ ಎಚ್. ವೀರರೆಡ್ಡಿ ಗ್ರಾಮೀಣ ಠಾಣಾ ಪಿಎಸ್ಐ ಮಹಮ್ಮದ್ ಇಷಾಕ್, ಉಪಸ್ಥಿತಿಯಲ್ಲಿ
ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿದ್ದರಿಂದ ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡುತ್ತಲೇ ಜೀವನ ನಡೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಅಕ್ಷರಂಶ: ಅತಂತ್ರ ಸ್ಥಿತಿಗೆ ಬದುಕು ಸಿಲುಕಿದೆ !ಮುಖ್ಯ ರಸ್ತೆಗಳ ಪಕ್ಕದಲ್ಲಿ ಸಣ್ಣಪುಟ್ಟ ಡಬ್ಬ ಅಂಗಡಿಗಳನ್ನು ಮಾಡಿಕೊಂಡು ಪ್ರತಿನಿತ್ಯ ವ್ಯಾಪಾರ ವೈವಾಟು ಮಾಡುತ್ತಿರುವವರಿಗೆ ಈ ಏಕಏಕಿ ತೆರವು ಶಾಕ್ ನೀಡಿದೆ.
ರಸ್ತೆ ಬದಿ ವ್ಯಾಪಾರಗಳನ್ನು ನಂಬಿ ಬ್ಯಾಂಕುಗಳಲ್ಲಿ ಸ್ವ ಸಹಾಯ ಗುಂಪುಗಳಲ್ಲಿ ಸಾಲ ಪಡೆದುಕೊಂಡಿದ್ದೇವೆ ಸಾಲ ಹೇಗೆ ತೀರಿಸಬೇಕು ಕುಟುಂಬ ನಿವಾರಣೆ ಹೇಗೆ ಮಾಡಬೇಕು ಎಂದು ಬೀದಿ ಬದಿಯ ವ್ಯಾಪಾರಸ್ಥರು ಮಾಧ್ಯಮದ ಮೂಲಕ ತಮ್ಮ ಅಳಿಲನ್ನು ವ್ಯಕ್ತಪಡಿಸಿದರು.
‘ಮಾನವೀಯ ದೃಷ್ಟಿಯಿಂದ ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಕರವೇ ಅಧ್ಯಕ್ಷ ಲಕ್ಷ್ಮಣ್ ಭೋವಿ, ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಮಂಜುನಾಥ್ ಗಾಣಿಗೇರ್, ಮುಖಂಡರಾದ ವೆಂಕಟೇಶ್ ಗಿರಿಜಾರಿ, ಗುರುರಾಜ್ ಮುಕುಂದ, ನಾಗರಾಜ್ ಪೂಜಾರ್, ಒತ್ತಾಯಿಸಿದ್ದಾರೆ,
ವರದಿ : ಬಸವರಾಜ ಬುಕ್ಕನಹಟ್ಟಿ