ಸೇಡಂ:ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಮಾದಿಗ ಸಮುದಾಯವದವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಕ್ರಮ ಸಂಖ್ಯೆ 61ರಲ್ಲಿ ಮಾದಿಗ ಬರೆಸಬೇಕು ಎಂದು ದಲಿತ ಮಾದಿಗ ಸಮನ್ವಯ ಸಮಿತಿ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಡಿಎಂಎಸ್ಎಸ್ ಸೇಡಂ ತಾಲೂಕ ಅಧ್ಯಕ್ಷರು ಮಾರುತಿ ಮುಗುಟಿ ‘ಮುಂದಿನ ಪೀಳಿಗೆಯ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ, ಏಳಿಗೆಗಾಗಿ ಮಾದಿಗ ಎಂದು ಬರೆಯಿಸಬೇಕು, ಒಂದು ವೇಳೆ ಅಲಕ್ಷ ಮಾಡಿ ಸರಿಯಾದ ಮಾಹಿತಿ ನೀಡದೆ ಹೋದರೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಅಲ್ಲದೇ, 30 ವರ್ಷಗಳ ಹೋರಾಟಕ್ಕೆ ಹಿನ್ನಡೆಯಾಗಬಹುದು’ ಎಂದು ತಿಳಿಸಿದ್ದಾರೆ.
ಈ ಸಮಯದಲ್ಲಿ ಸೇಡಂ ತಾಲೂಕು ಅಧ್ಯಕ್ಷ ಮಾರುತಿ ಕೊಡಂಗಲ್, ವಿಜಯ್ ಕುಮಾರ್ ಆಡಿಕೆ, ಶಂಭುಲಿಂಗ ನಾಟಿಕರ್, ಅಶೋಕ್ ಫಿರಂಗಿ, ಜಗನ ಚಿಂಪಳ್ಳಿ, ಬಸವರಾಜ್ ಕಾಳಗಿ, ಮಲ್ಲಿಕಾರ್ಜುನ್ ವಾಲಿಕರ್, ಹನುಮಂತ್ ಬರತ್ನೂರ್, ರಾಮು ಕಣೆಕಲ್, ಭೀಮು ಮುಧೋಳ್ ಇನ್ನು ಹಲವು ಸಮಾಜದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




