ಸೇಡಂ:ವಿವಿಧ ಬೇಡಿಕೆಗಳ ಕುರಿತು ಕೊಡ್ಲಾ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ಅವರ ನೇತೃತ್ವದಲ್ಲಿ ಸುಮಾರು 2 ಗಂಟೆ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ರಸ್ತೆಯ ತೆಗ್ಗುಗುಂಡಿಯನ್ನಾದರು ಮುಚ್ಚಿ ಇಲ್ಲವೇ ಆ ತೆಗ್ಗು ಗುಂಡಿಗಳಲ್ಲಿ ನಮ್ಮನ್ನು ಮುಚ್ಚಿ ಎಂದು ತೆಗ್ಗಿನಲ್ಲಿ ಮಲಗಿ ವಿನೂತನ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುತ್ತೇದಾರ್ ವಿವಿಧ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಯಾದಗಿರಿ ರಸ್ತೆ ತುಂಬಾ ಹದೆಗೆಟ್ಟಿದ್ದು ಈ ರಸ್ತೆಗೆ ಸಮೀಪವಿರುವ ಹಳ್ಳಿಗಳು ಕಲಕಾಂಬ, ಅಳ್ಳೊಳ್ಳಿ, ಬೆನಕನಹಳ್ಳಿ, ಕೊಡ್ಲಾ, ಮುಸ್ಟಳ್ಳಿ, ನಾಮವರ, ಹಂದರಿಕಿ, ಗೌಡನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ ತುಂಬಾ ತೊಂದರೆಯಾಗಿದ್ದು ಲೋಕೋಪಯೋಗಿ ಇಲಾಖೆ ನಮಗೆ ಸಂಬಂಧವಿಲ್ಲದ ರಸ್ತೆ ಎಂಬಂತೆ ವರ್ತಿಸುತ್ತಿದೆ. ಇದು ಅಲ್ಲದೆ ಸೇಡಂನಿಂದ ಕಲಬುರಗಿ ಹೋಗುವ ರಸ್ತೆ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಬಾಣಂತಿಯರಿಗೆ ಅನಾರೋಗ್ಯದ ವೈದ್ಯರು ಪ್ರಯಾಣ ಮಾಡುತ್ತಾರೆ ಜಿ,ವಿ,ಆರ್ ವ್ಯವಸ್ಥಾಪಕರು ಇದರ ಬಗ್ಗೆ ನಿರ್ಲಕ್ಷ್ಯ ದೋರಣೆ ತೋರುತ್ತಿದ್ದಾರೆ. ರಸ್ತೆ ಸುಧಾರಣೆ ಇಲ್ಲದಿದ್ದರೆ ತೆರಿಗೆ ಕಟ್ಟಲು ಸರ್ಕಾರ ನಿರಾಕರಿಸಿದರು ಇವರು ಶುಲ್ಕ ಎರಡು ಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅತಿ ಶೀಘ್ರದಲ್ಲೇ ರಸ್ತೆ ಸುಧಾರಣೆ ಮಾಡಬೇಕು ಹಾಗೂ ಕೊಡ್ಲಾ ಮತ್ತು ಅಡಿಕಿ ಗ್ರಾಮದಲ್ಲಿ ಆಧಾರ್ ಕೇಂದ್ರಗಳು ಸ್ಥಗಿತಗೊಂಡಿದ್ದು ಸಾರ್ವಜನಿಕರಿಗೆ ರೈತರಿಗೆ ಕೂಲಿಕಾರ್ಮಿಕರಿಗೆ ಸುಮಾರು ಐವತ್ತು ಕಿಲೋಮೀಟರ್ ದೂರ ಹೋಗಿ ಕೇಂದ್ರ ಸ್ಥಾನ ಸೇಡಂ ನಲ್ಲಿ ಮಾಡಿಕೊಳ್ಳು ಆಗುತ್ತಿಲ್ಲ ಆದ್ದರಿಂದ ಅತಿ ಶೀಘ್ರದಲ್ಲೇ ಆಧಾರ್ ಕೇಂದ್ರಗಳು ಪ್ರಾರಂಭಿಸಬೇಕು ಒಂದು ವೇಳೆ ಈ ಹೋರಾಟಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ಮಾಡಿದ್ದಲ್ಲಿ ತಮ್ಮ ಕಾರ್ಯಾಲಯದ ಎದುರುಗಡೆ ಉಪವಾಸ ಸತ್ಯಾಗ್ರಹ ಕೂಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ ರಾಮಚಂದ್ರ ಗುತ್ತೇದಾರ್ ಅವರು ಆಕ್ರೋಶ ವ್ಯಕ್ತಪಡಿಸಿ ತಾಲೂಕ ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರು ಸೇಡಂ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಎಪಿಎಂಸಿ ಸೇಡಂ ಸಿದ್ದು ಬಾನರ, ಮಹೇಶ್ ಪಾಟೀಲ್, ಚಂದ್ರಶೇಖರ್, ದೇವುಕುಮಾರ್, ಭೀಮಯ್ಯ, ಶ್ರೀನಿವಾಸ್ ರೆಡ್ಡಿ, ಬಸವರಾಜ ಕೊಡ್ಲಾ, ಸಂತೋಷ್ ನಾಮವಾರ, ನಾಗಿರೆಡ್ಡಿ ಸಂತಿ ಸೇರಿದಂತೆ ಕೊಡ್ಲಾ ಗ್ರಾಮಸ್ಥರು ಹಾಗೂ ಕರವೇ ಸೈನಿಕರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




