ರಾಮದುರ್ಗ:-ತಾಲೂಕಿನ ಸುರೇಬಾನ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2024-25 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮವನ್ನು ಬಿ ಆಯ್ ಆರ್ ಟಿ ಆರ್ ಎಸ್ ಸಂಕನ್ನವರ ಮುಖ್ಯ ಅಥಿತಿಗಳಾಗಿ ಉದ್ಘಾಟಿಸಿದರು.ಪ್ರೌಡ ಶಾಲಾ ಮುಖ್ಯೋಪಾಧ್ಯಾಯರಾದ ಬಿ ಎಸ್ ತಿಮ್ಮನಗೌಡ್ರ, ಜಿ.ಜಿ.ಗಣಾಚಾರಿ , ಎಸ್ ಎಸ್ ತೊರಗಲ್ಮಠ , ಶಂಕರಗೌಡ ಪಾಟೀಲ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರ್ ಪಿ ಬೆಟಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷದಂತೆ ಇಲಾಖೆಯ ನಿಯಮಾನುಸಾರ 1-4, 5-7, 8-10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ.
ಎಂದರು.ಕಾರ್ಯಕ್ರಮದಲ್ಲಿ ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಆರ್ ಪಿ ಬೆಟಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಗುರುಗಳಾದ ಎಂ ಎಸ್ ಮೇಟಿ ಸ್ವಾಗತಿಸಿದರು,ಶಿಕ್ಷಕರಾದ ಶಂಕರ ಕೊಣ್ಣೂರ ಪುಷ್ಪಾರ್ಚನೆ ನಡೆಸಿದರು, ಸಿ ಆರ್ ಪಿ, ವಿ.ಡಿ ಯಲಗೋಡ ವಂದಿಸಿದರು.
ವರದಿ: ಕುಮಾರ ಎಮ್