Ad imageAd image

ಜುಲೈ 21ನೇ ತಾರೀಕು ಪಾವಗಡಕ್ಕೆ ಸಿಎಂ ಆಗಮನ

Bharath Vaibhav
ಜುಲೈ 21ನೇ ತಾರೀಕು ಪಾವಗಡಕ್ಕೆ ಸಿಎಂ ಆಗಮನ
WhatsApp Group Join Now
Telegram Group Join Now

 ———————————————–ಪೂರ್ವ ಸಿದ್ಧತೆ ಕೈಗೊಳ್ಳಲು ಪರಿಶೀಲಿಸಿದ ಗೃಹ ಸಚಿವ ಪರಮೇಶ್ವರ

ಪಾವಗಡ :  ದಿನಾಂಕ.12/07/25 ಶನಿವಾರ ರಂದು ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕು ಸ್ಥಾಪನೆ ನೆರವೇರಿಸಲು ಪಾವಗಡ ಪಟ್ಟಣಕ್ಕೆ ಜುಲೈ 21ನೇ ತಾರಿಕ್ ಬರುತ್ತಿದ್ದಾರೆ ಅದಕ್ಕೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಪೂರ್ವಭಾವಿ ಸಭೆ ನಡೆಸಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಯಾವುದೇ ಲೋಪವಾಗದಂತೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ಮಾತನಾಡಿ.
ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯ ಎಲ್ಲಾ ಮನೆಗಳಿಗೂ ತುಂಗಭದ್ರಾ ಶುದ್ಧ ಕುಡಿಯುವ ನೀರು ಸಿಗುವಂತಾಗಬೇಕು. 2356 ಕೋಟಿ ವೆಚ್ಚದ ತುಂಗಭದ್ರಾ,
ಕುಡಿಯುವ ನೀರಿನ ಯೋಜನೆ ಯೋಜನೆ ಆಗಿದ್ದು ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಕಳಪೆ ಕಾಮಗಾರಿಯಿಂದ ಸಮಸ್ಯೆ ಆದರೆ ಅಧಿಕಾರಿಗಳೆ ನೇರ ಹೊಣೆ. ಈ ಯೋಜನೆಯಿಂದ ತಾಲ್ಲೂಕಿನ ಚಿತ್ರಣವೇ ಬದಲಾಗಬೇಕು ನಂತರ
ವಿಶ್ವದಲ್ಲಿಯೇ ಪಾವಗಡ ತಾಲ್ಲೂಕು ಸೊಲಾರ್ ಪಾರ್ಕ್ ನಿರ್ಮಾಣದಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳುತ್ತಿದ್ದು, ಸರ್ಕಾರ ಮತ್ತು ಖಾಸಗಿವರಿಂದ 3050 ಮೆಗಾವಾಟ್ ವಿದ್ಯತ್ ಉತ್ಪಾದನೆ ಮಾಡಬಹುದಾಗಿದೆ. ಇದರಿಂದ ವಿಶ್ವವೇ ಪಾವಗಡ ತಾಲ್ಲೂಕಿನತ್ತ ತಿರುಗಿ ನೋಡುವಂತಾಗಿದೆ ಎಂದು ಹೇಳಿ.
ತುಮಕೂರು ಜಿಲ್ಲೆಯ ತುಮುಲ್‌ ಅಧ್ಯಕ್ಷ ಹಾಗೂ ಪಾವಗಡ ವಿಧಾನಸಭೆ ಶಾಸಕ ಹೆಚ್ ವಿ ವೆಂಕಟೇಶ್ ರವರಿಗೆ ಪಾವಗಡ ತಾಲ್ಲೂಕಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ಅಥವಾ ರೈತರ ಅನುಕೂಲಕ್ಕಾಗಿ ಒಂದು ಭವನ ನಿರ್ಮಿಸುವುದಕ್ಕೆ ನಿಮ್ಮ ಇಲಾಖೆಯ ತುಮಕೂರು ಜಿಲ್ಲೆಯ ತುಮುಲ್‌ ನಿಂದ 10 ಕೋಟಿ ವೆಚ್ಚದಲ್ಲಿ ಭವನವನ್ನು ನಿರ್ಮಿಸುವುದಕ್ಕೆ ಹಣ ನೀಡಬೇಕು ಎಂದು ಹೇಳಿದರು.

ಈ ಪೂರ್ವಭಾವಿ ಸಭೆಗೆ ಭಾಗವಹಿಸಿದವರು. ಶಾಸಕ ಹೆಚ್ ವಿ ವೆಂಕಟೇಶ್. ಜಿಲ್ಲಾಧಿಕಾರಿ. ಶೋಭಾ ಕಲ್ಯಾಣ.
ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಭುಜಿ. ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್. ಕೆ.ವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಭಾಗವಹಿಸಿದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!