Ad imageAd image

ಕಾಂಗ್ರೆಸ್ ಶಾಸಕರ ಮನಸ್ಸುಗಳು ಕದಲಿದರೇ ಸಿಎಂ ಬದಲಾವಣೆ ಖಚಿತ : ಮೈಲಾರಲಿಂಗೇಶ್ವರ ಕಾರ್ಣಿಕ 

Bharath Vaibhav
ಕಾಂಗ್ರೆಸ್ ಶಾಸಕರ ಮನಸ್ಸುಗಳು ಕದಲಿದರೇ ಸಿಎಂ ಬದಲಾವಣೆ ಖಚಿತ : ಮೈಲಾರಲಿಂಗೇಶ್ವರ ಕಾರ್ಣಿಕ 
WhatsApp Group Join Now
Telegram Group Join Now

ವಿಜಯನಗರ: ಕಾಂಗ್ರೆಸ್ ಶಾಸಕರ ಮನಸ್ಸುಗಳು ಕದಲಿದರೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ ಎಂಬುದಾಗಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ.

ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ.ಈ ನುಡಿಯಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗುವ ಯೋಗ ಇದೆ ಎಂಬುದಾಗಿ ಶ್ರೀವೆಂಕಪ್ಪಯ್ಯ ಮೈಲಾರದ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯ ಬದಲಾವಣೆ ಗೂಡಾರ್ಥದಲ್ಲಿದೆ ಎಂಬುದಾಗಿ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿಯನ್ನು ಮೈಲಾರಲಿಂಗೇಶ್ವರ ದೇವರ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದಾರೆ. 2025ರ ಪ್ರಸಕ್ತ ವರ್ಷದ ದೈವವಾಣಿ ತುಂಬಿದ ಕೊಡ ತುಳಿಕಿತಲೇ ಪರಾಕ್ ಎಂಬುದಾಗಿದೆ.

ಇದರ ಅರ್ಥ ರಾಜ್ಯದಲ್ಲಿ ತುಂಬಿದ ಕೊಡಪಾನದಂತೆ ಈಗ ಸರ್ಕಾರ ಇದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೇ ಯಾವುದೇ ತೊಂದರೆ ಆಗಲ್ಲ. ಮನಸ್ಸು ಕದಲಿದರೇ ಸರ್ಕಾರಕ್ಕೆ ಅಪಾಯವಿದೆ ಎಂಬುದಾಗಿ ಕಾರ್ಣಿಕ ನುಡಿಯಾಗಿದೆ. ತುಂಬಿದ ಕೊಡ ಏನಾದರೂ ತುಳಿಕಿದರೇ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಬದಲಾವಣೆ ಆಗೋದು ಖಚಿತ ಎಂದು ವೆಂಕಪ್ಪಯ್ಯ ಒಡೆಯರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!