Ad imageAd image

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ : ಸಿಎಂ ಸ್ಪಷ್ಟನೆ

Bharath Vaibhav
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ : ಸಿಎಂ ಸ್ಪಷ್ಟನೆ
siddaramaiah
WhatsApp Group Join Now
Telegram Group Join Now

ಚಾಮರಾಜನಗರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರು. ಆದರೆ ಬಿಜೆಪಿ ನಾಯಕರು ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲುತ್ತೆ ಅಂತ ಹೇಳಿದ್ದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಚಾಮರಾಜನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಅಭಿನಂದನಾ ಸಮಾರಂಭ ನಡೆಯುತ್ತಿದ್ದು, ಈ ಒಂದು ಸಮಾರಂಭದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದು ಈ ಹಿಂದೆ ಬಿಜೆಪಿಯವರು ಹೇಳುತ್ತಿದ್ದರು. ಗ್ಯಾರಂಟಿ ಜಾರಿಯಾದ ಬಳಿಕ ಸರ್ಕಾರದ ಬಳಿ ಹಣ ಇಲ್ಲ ಅಂತ ಕೂಡ ಹೇಳುತ್ತಿದ್ದಾರೆ ಬಿಜೆಪಿಯವರು ಬರಿ ಸುಳ್ಳನು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸುಳ್ಳು ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಸುಳ್ಳು ಹೇಳಿ 1.88 ಲಕ್ಷ ಮತಗಳ ಅಂತರದಿಂದ ಗೆಲ್ಲಲು ಸಾಧ್ಯನಾ? ಬಿಜೆಪಿಯವರು ಎಷ್ಟೇ ಸುಳ್ಳು ಹೇಳಿದರು ಮತದಾರರು ದಡ್ಡರಲ್ಲ.ಸಂಸದರು ರಾಜ್ಯದ ಪರ ಧ್ವನಿ ಎತ್ತಿ ಎಂದು ಮನವಿ ಮಾಡಿದ್ದೇವೆ.ಕಳೆದ ಬಾರಿ ಒಬ್ಬ ಸಂಸದ ಇದ್ದರೂ ಈ ಬಾರಿ 9 ಮಂದಿ ಗೆದ್ದಿದ್ದಾರೆ ನಿಜವಾಗಿಯೂ ಸೋಲು ಆಗಿರುವುದು ಬಿಜೆಪಿ ಅವರಿಗೆ.

ಕಳೆದ ಬಾರಿ ಬಿಜೆಪಿ 303 ಸ್ಥಾನಗಳಲ್ಲಿ ಗೆದ್ದಿತ್ತು. ಈಗ 243 ಗೆದ್ದಿದ್ದಾರೆ. ನಾವು 54ಸ್ಥಾನಗಳನ್ನು ಗೆದ್ದಿದ್ದೆವು. ಈ ಚುನಾವಣೆಯಲ್ಲಿ 99 ಸ್ಥಾನ ಗೆದ್ದಿದ್ದೇವೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಅಂತ ಹೇಳುತ್ತಾರೆ. ಆದರೆ ನಾನು ಎರಡನೇ ಬಾರಿಗೆ ಚಾಮರಾಜನಗರಕ್ಕೆ ಬಂದಿರುವೆ ಎಂದು ಚಾಮರಾಜನಗರ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!