ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಇ ಮೇಲ್ ಮೂಲಕ ಜೀವ ಬೆದರಿಕೆ ಪತ್ರ ಕಳಿಸಿರುವ ಘಟನೆ ನಡೆದಿದೆ. ಕಿಡಿಗೇಡಿಗಳ ಕೃತ್ಯ ಇದಾಗಿರಬಹುದಾದ ಶಂಕೆ ಎದುರಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಂಧಾರ್ ರಜಪೂತ್ ಎಂಬ ಹೆಸರಿನಿಂದ ಈ ಇಮೇಲ್ ಸಂದೇಶ ಬಂದಿದ್ದು, ಇಬ್ಬರನ್ನೂ ಕೊಲೆ ಮಾಡಿ ಫ್ರಿಜ್ ಮತ್ತು ಟ್ರ್ಯಾಲಿ ಬ್ಯಾಗಿಗೆ ತುಂಬುವುದಾಗಿ ತುಂಬುವುದಾಗಿ ಇದರಲ್ಲಿ ಬೆದರಿಕೆ ಹಾಕಲಾಗಿದೆ.
ರಾಮಪುರದ ಪ್ರಭಾಕರ್ ಗೆ ನಾನು ಒಂದು ಕೋಟಿ ರೂ. ಸಾಲ ನೀಡಿದ್ದೇನೆ. ಈ ಸಾಲವನ್ನು ನನಗೆ ನನಗೆ ವಾಪಸ್ ಕೊಟ್ಟಿಲ್ಲ. ಹೀಗಾಗಿ ಅವನನ್ನೂ ಸಹ ಕೊಲೆ ಮಾಡುತ್ತೇನೆ ಎಂದು ಇ ಮೇಲ್ ನಲ್ಲಿ ಅಸಂಬದ್ಧವಾಗಿ ಉಲ್ಲೇಖಿಸಲಾಗಿದೆ. ಉಲ್ಲೇಖಿತ ರಾಮಪುರದ ಪ್ರಭಾಕರ್ ಯಾರೆಂಬುದು ತಿಳಿದುಬಂದಿಲ್ಲ.