ರಾಯಚೂರು: ರಾಜ್ಯದಲ್ಲಿ ವಕ್ಫ್ ರಾದ್ದಾಂತ ನಡೆಯುತ್ತಿರುವ ಹೊತ್ತಲ್ಲೇ ಮಂತ್ರಾಲಯ ಜಾಗ ನವಾಬರು ಕೊಟ್ಟಿದ್ದು ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದಿದ್ದರು.
ಆಗ ಮಂತ್ರಾಲಯ ಖಾಜಿಗೆ ಕೊಟ್ಟ ಜಾಗ ಕ್ಯಾನ್ಸಲ್ ಮಾಡಿ ಆಂದೋನಿ ನವಾಬ್‌ರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು. ಈಗ ಅದನ್ನ ವಕ್ಫ್ ಬೋರ್ಡ್ ಅಂತಾ ಯಾರಾದ್ರೂ ಕೇಳಲು ಹೋಗಿದ್ರಾ ಎಂದು ಪ್ರಶ್ನಿಸಿದರು.
ಅದೇ ರೀತಿ ಶೃಂಗೇರಿ ಶಾರದಾಪೀಠದ ಮೇಲೆ ಪೇಶ್ವೆಯರು ದಾಳಿ ಮಾಡಿದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾಪೀಠವನ್ನು ಸ್ಥಾಪನೆ ಮಾಡಿದರು.
ಇದು ಇತಿಹಾಸ, ಇದು ನಮ್ಮ ಪರಂಪರೆ, ಇದು ನಮ್ಮ ಸಂಸ್ಕೃತಿ. ಆದರೆ ಇದೆಲ್ಲ ಸಾಮರಸ್ಯ ಬಿಟ್ಟು ಈ ಚಿಲ್ಲರೇ ಮುಂಡೆವು ರಾಜಕಾರಣಕ್ಕೆ ಬಂದು ಈ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಹೆಚ್‌ಡಿ ಮೇಲೆ ಜಮೀರ್ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಕರಿಯ ಪದ ಬಳಕೆ ಮಾಡಿರುವುದು ತಪ್ಪು. ಜಮೀರ್‌ನ ಬೆಳೆಸಿದ್ದೇ ಕುಮಾರಸ್ವಾಮಿ. ಈಗ ಅವರೇ ತಿರುಗಿಬಿದ್ದಿದ್ದಾರೆ. ಕುಮಾರಸ್ವಾಮಿ ಸಾಕಿದ್ದು ಅವರಿಗೆ ಇಂದು ಮುಳುವಾಗಿದೆ ಇದು ದುರ್ದೈವ ಎಂದರು.