ಬೆಳಗಾವಿ: ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನರು ಮೃತ ಮಟ್ಟ ಘಟನೆ ನನಗೆ ತಿಳಿದೇ ಇಲ್ಲ ಎಂದು ಹೇಳಿರುವ ಸಿ.ಎಂ. ಹೇಳಿಕೆ ನಾಚಿಕೆಗೀಡು, ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ಹಕ್ಕು ಇಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಖಾರವಾಗಿ ನುಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸುವುದು ಬೇಡ ಎಂದು ಸಲಹೆ ನೀಡಿದರೂ ಸಲಹೆಯನ್ನು ದಿಕ್ಕರಿಸಿ ಕಾರ್ಯಕ್ರಮ ನಡೆಸಿದ್ದು, ಈಗ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಜವಾಬ್ದಾರಿ ಸಿಎಂ ಆಗಿ ತಮಗೆ ಕಾಲ್ತುಳಿತ ಹಾಗೂ 11 ಜನರು ಮೃತ ಪಟ್ಟಘಟನೆ ಗೊತ್ತೇ ಇಲ್ಲ ಎಂದರೆ ಏನರ್ಥ. ತಕ್ಷಣ ಸಂಭ್ರಮಾಚರಣೆ ನಡೆಸುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿದರು. ಈಗ ಆ ಹನ್ನೊಂದು ಜನರ ಕುಟುಂಬಗಳ ಗತಿ ಏನು? ಈ ಘಟನೆಗೆ ನೇರವಾಗಿ ಹೊಣೆಯಾಗಿದ್ದು, ತಕ್ಷಣ ಅವರು ರಾಜೀನಾಮೆ ನೀಡಬೇಕು. ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ಹಕ್ಕು ಇಲ್ಲ ಎಂದರು.




