Ad imageAd image

ಒಂದೇ ವರ್ಷದಲ್ಲಿ 48 ಅಪರಾಧಿಗಳ ಎನ್‌ಕೌಂಟರ್‌ : ಸಿಎಂ ಯೋಗಿ ಆದಿತ್ಯನಾಥ ದಾಖಲೆ

Bharath Vaibhav
ಒಂದೇ ವರ್ಷದಲ್ಲಿ 48 ಅಪರಾಧಿಗಳ ಎನ್‌ಕೌಂಟರ್‌ : ಸಿಎಂ ಯೋಗಿ ಆದಿತ್ಯನಾಥ ದಾಖಲೆ
WhatsApp Group Join Now
Telegram Group Join Now

ಲಖನೌ: ಉತ್ತರ ಪ್ರದೇಶ ಪೊಲೀಸರು 2025ರಲ್ಲಿ 48 ಆರೋಪಿ, ಅಪರಾಧಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ.2017ರಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದಾಗಿನಿಂದ ಎಂಟು ವರ್ಷಗಳಲ್ಲಿ ನಡೆದ ಅಧಿಕ ಎನ್‌ಕೌಂಟರ್‌ಗಳಾಗಿವೆ.

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋ‍ಷ್ಠಿ ನಡೆಸಿ ಮಾತನಾಡಿದ ಡಿಜಿಪಿ ರಾಜೀವ್ ಕೃಷ್ಣ, 2025ರ ಮಾರ್ಚ್‌ 20ರಿಂದ ಡಿ.20ರವರೆಗಿನ ಪೊಲೀಸ್ ಕ್ರಮಗಳ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ.

2025 ರಲ್ಲಿ ಮಾತ್ರ, ಪೊಲೀಸರು 2,739 ಕಾರ್ಯಾಚರಣೆಗಳನ್ನು ನಡೆಸಿದ್ದು, ಇದರಲ್ಲಿ 3,153 ಆರೋಪಿಗಳು ಗಾಯಗೊಂಡಿದ್ದಾರೆ. 48 ಮಂದಿ ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟಿದ್ದಾರೆ. ಈ ಕಾರ್ಯಾಚರಣೆಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಮೃತಪಟ್ಟಿದ್ದಾರೆ.

ಎನ್‌ಕೌಂಟರ್‌ನಲ್ಲಿ 2018 ರಲ್ಲಿ 41, 2019 ರಲ್ಲಿ 34 ಮತ್ತು 2020 ಮತ್ತು 2021 ರಲ್ಲಿ ತಲಾ 26 ರಷ್ಟಿತ್ತು. 2022 ರಲ್ಲಿ 13, 2023 ರಲ್ಲಿ 26 ಮತ್ತು 2024 ರಲ್ಲಿ 25 ಆಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಹಿಂದಿನ ಏಳು ವರ್ಷಗಳಿಗೆ ಹೋಲಿಸಿದರೆ 2025 ರಲ್ಲಿ ಪೊಲೀಸ್ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಆರೋಪಿಗಳು ಮೃತಪಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!