ಬೆಂಗಳೂರು : ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಕೂಗು ಜೋರಾಗಿದೆ. ಸದ್ಯ ಕರುನಾಡ ರಾಜಕೀಯ ರಾಜಧಾನಿ ದಿಲ್ಲಿಗೆ ಶಿಫ್ಟ್ ಆಗಿದೆ.
ನಿನ್ನೆಯಷ್ಟೇ ಡಿಸಿಎಂ ಡಿಕೆಶಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆ ಇವತ್ತು ಸಿಎಂ ಸಿದ್ದರಾಮಯ್ಯ, ಇಬ್ಬರು ಸಚಿವರು ಜತೆ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟ್ ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ.
ಸಚಿವ ಭೈರತಿ ಸುರೇಶ್, ಸಚಿವ ಕೆಜೆ ಜಾರ್ಜ್ ಜೊತೆಗೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಕೈ ಹೈ ಕಮಾಂಡ್ ಜತೆಗೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ನಲ್ಲಿ ಕ್ರಾಂತಿ ಆಗಲಿದೆ ಎಂಬ ಮಾತುಗಳು ಕಳೆದ 15ದಿನದಿಂದ ಹೆಚ್ಚಾಗಿದೆ. ಸಿಎಂ ಸಿದ್ದು ಕೂಡ ನಾನೇ 5 ವರ್ಷ ಸಿಎಂ ಅಂತ ಹೇಳಿ ಎಲ್ರನ್ನ ಅಚ್ಚರಿಸಿಗೊಳಿಸಿದ್ದರು. ಈ ಬೆನ್ನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿರೋದು ಕೌತುಕ ಮನೆ ಮಾಡಿದೆ.