Ad imageAd image

ಹುಕ್ಕೇರಿ ಅರ್ಬನ್ ಬ್ಯಾಂಕಿನ ಚುನಾವಣೆಯಲ್ಲಿ ಸಹಕಾರಿ ಪೆನಲ್ ಅಭ್ಯರ್ಥಿಗಳ ಗೆಲವು.

Bharath Vaibhav
ಹುಕ್ಕೇರಿ ಅರ್ಬನ್ ಬ್ಯಾಂಕಿನ ಚುನಾವಣೆಯಲ್ಲಿ ಸಹಕಾರಿ ಪೆನಲ್ ಅಭ್ಯರ್ಥಿಗಳ ಗೆಲವು.
WhatsApp Group Join Now
Telegram Group Join Now

ಹುಕ್ಕೇರಿ: ನಗರದ ಪ್ರತಿಷ್ಟಿತ ಅರ್ಬನ್ ಬ್ಯಾಂಕಿನ 2025 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರಿ ಪೆನಲ್ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಸೋಮಣ್ಣಾ ಗಂಧ, ಮಲ್ಲಿಕಾರ್ಜುನ ತೇರಣಿ, ಶಿವಾನಂದ ನೂಲಿ, ಸೋಮಶೇಖರ ಪಟ್ಟಣಶೇಟ್ಟಿ, ಚಂದ್ರಶೇಖರ ಪಾಟೀಲ, ಶಂಕರಗೌಡಾ ಪಾಟೀಲ, ಸುಭಾಷ ಪಾಟೀಲ, ವಿಜಯ ರವದಿ, ಸಿದ್ದೇಶ್ವರ ಹೆದ್ದೂರಶೇಟ್ಟಿ,ಮಹಿಳಾ ಮಿಸಲು ಕ್ಷೇತ್ರದಿಂದ ಗೌರವ್ವಾ ನಾಯಿಕ , ಸುವರ್ಣಾ ಹುಂಡೆಕಾರ ಮತ್ತು ಹಿಂದುಳಿದ ಅ ವರ್ಗದಿಂದ ಸ್ವತಂತ್ರ ಅಭ್ಯರ್ಥಿ ಮೌನೇಶ ಪೋತದಾರ ಬಹುಮತದಿಂದ ಆಯ್ಕೆಯಾದರು.
ಪರಶಿಷ್ಟ ವರ್ಗಗಳ ಕ್ಷೇತ್ರದಿಂದ ರಾಜು ಬಾಗಲಕೋಟಿ, ಪರಶಿಷ್ಟ ಪಂಗಡ ಕ್ಷೇತ್ರದಿಂದ ಮಲ್ಲಿಕಾರ್ಜುನ ಕೋಟ್ಯಾಗೋಳ ಮತ್ತು ಬ ವರ್ಗ ದಿಂದ ಪ್ರಭು ಸಾಂಬಾರೆ ಅವಿರೋಧವಾಗಿ ಆಯ್ಕೆ ಯಾಗಿದ್ದರು.

ಬೆಳಗಿನ ಜಾವದಿಂದ ನಡೆದ ಮತದಾನದಲ್ಲಿ ಸದಸ್ಯರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು ಕೊನೆಯಲ್ಲಿ ಮತ ಎಣಿಕೆ ನಂತರ ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣೆ ಅಧಿಕಾರಿ ಶಶಿಕಾಲಾ ಪಾಟೀಲ ವಿಜೇತ ಅಭ್ಯರ್ಥಿಗಳ ಹೆಸರು ಮತ್ತು ಮತಗಳ ಮಾಹಿತಿ ನೀಡಿ ಫಲಿತಾಂಶ ಘೋಷಣೆ ಮಾಡಿ ಚುನಾವಣಾ ಘೋಷನಾ ಪತ್ರಗಳನ್ನು ವ್ಯವಸ್ಥಾಪಕ ಕೆ ಬಿ ಬಂದಾಯಿ ಯವರಿಗೆ ಹಸ್ತಾಂತರಿಸಿದರು. ನಂತರ ವೀಜೆತ ಅಭ್ಯರ್ಥಿಗಳು ಗುಲಾಲ ಹಚ್ಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ವರದಿ: ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!