Ad imageAd image

ತೆಂಗಿನಕಾಯಿ. ಮಂಗಳಾರತಿ ವೈಶಿಷ್ಟ್ಯ

Bharath Vaibhav
ತೆಂಗಿನಕಾಯಿ. ಮಂಗಳಾರತಿ  ವೈಶಿಷ್ಟ್ಯ
WhatsApp Group Join Now
Telegram Group Join Now

ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತೆ ತೆಂಗಿನಕಾಯಿಯನ್ನೆ ಯಾಕೆ ತೆಗೆದುಕೊಂಡು ಹೋಗುತ್ತೇವೆ ?*

ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತೆ ತೆಂಗಿನಕಾಯಿಯನ್ನೆ ಯಾಕೆ ತೆಗೆದುಕೊಂಡು ಹೋಗುತ್ತೇವೆ ?*

ದೇವರಿಗೆ ಇದೇ ಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಏಕೆ??

ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ .

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ ಹಾಗೆಯೇ

ತೆಂಗಿನಕಾಯಿ ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯ ಏನು?

 

ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.

ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೇ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ.

ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು.ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.

ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.

ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ.

ಇನ್ನೂ ಹೇಳಬೇಕೆಂದರೆ ಬಾಳೆ ಮತ್ತು ತೆಂಗಿನ ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಉಪಯುಕ್ತವಾಗಿವೆ, ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ ನೀಡುವುದು.

ತೆಂಗಿನ ಕಾಯಿಯನ್ನು ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷ ವೂ ಕೂಡ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ.ಅದಕ್ಕೆ ಇದನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ.

ನಮ್ಮ ಸಂಪ್ರದಾಯದಲ್ಲಿ ಇಷ್ಟೊಂದು ಅರ್ಥವಿರುವುದು ನಮ್ಮ ಭಾರತದ ಪರಂಪರೆಯ ಘನತೆಗೆ ಸಾಕ್ಷಿಯಾಗಿದೆ.

ಮಾತೃಭೂಮಿ ಹಿಂದೂ ಸ್ಪಂದನೆ

ನಮ್ಮವರಿಂದ ನಮಗಾಗಿ

✍️ ಸ್ವಚ್ಛ ಹಿಂದೂ ರಾಷ್ಟ್ರ ನಿರ್ಮಾಣ

WhatsApp Group Join Now
Telegram Group Join Now
Share This Article
error: Content is protected !!